ನವದೆಹಲಿ: ಆಡಳಿತಾರೂಢ ಬಿಜೆಪಿ ಕೇವಲ ಬಾಡಿಗೆದಾರ, ಪ್ರಜಾಪ್ರಭುತ್ವದ ಮಾಲೀಕರಲ್ಲ ಎಂದು ಮಂಗಳವಾರ ಹೇಳಿದೆ. ಅದಾನಿ ವಿಷಯದಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನಾಟಕವನ್ನು ಪುನರ್ ಆರಂಭಿಸಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
ರಾಹುಲ್ ಗಾಂಧಿಯನ್ನು ಮೀರ್ ಜಾಪರ್ ಎಂದು ಟೀಕಿಸಿದ ನಂತರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಕ್ಷವನ್ನು ಇತಿಹಾಸದಲ್ಲಿ ದೇಶದ್ರೋಹಿಗಳ ರೀತಿಯಲ್ಲಿ ಎಂದು ನೋಡಲಾಗುತ್ತದೆ. ಅದರ ಸೈದ್ಧಾಂತಿಕ ಪೂರ್ವಜರು ಬ್ರಿಟಿಷರ ಕ್ಷಮೆಯಾಚಕರು ಎಂಬುದು ಚೆನ್ನಾಗಿ ಗೊತ್ತಿದೆ ಎಂದರು.
ತಮ್ಮ ಸ್ನೇಹಿತನ ಕೃತ್ಯಗಳ ಬಗ್ಗೆ ಪ್ರಧಾನಿಯಿಂದ ರಾಹುಲ್ ಉತ್ತರ ಕೇಳುತ್ತಿದ್ದಾರೆ. ಇದರಿಂದ ಆತಂಕದಲ್ಲಿರುವ ಬಿಜೆಪಿ ಅದಾನಿ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯಲು ಹೊಸ ನಾಟಕಗಳನ್ನು ರೂಪಿಸಲು ಪ್ರಯತ್ನಿಸುತ್ತಿದೆ ಎಂದು ಖೇರಾ ಸುದ್ದಿಗಾರರಿಗೆ ತಿಳಿಸಿದರು.
ಬ್ರಿಟಿಷರ ಕ್ಷಮೆ ಕೇಳಿ, ಲಂಡನ್‌ಗೆ ನಿಷ್ಠರಾಗಿಯೂ ಉಳಿದವರು ಮತ್ತು ಬ್ರಿಟಿಷ್ ವೈಸ್‌ರಾಯ್‌ನಿಂದ ಪಿಂಚಣಿ ಪಡೆದವರು ನಮಗೆ ದೇಶಭಕ್ತಿ ಬಗ್ಗೆ ಉಪದೇಶ ನೀಡುತ್ತಿರುವುದು ದುಃಖಕರವಾಗಿದೆ. ಸರ್ಕಾರದ ಕಾರ್ಯಗಳನ್ನು ಟೀಕಿಸುವುದು ದೇಶವನ್ನು ಟೀಕಿಸಿದಂತಾಗುವುದಿಲ್ಲ, ಇದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ಸ್ಥಿತಿಯ ಬಗ್ಗೆ ಚರ್ಚೆಗಳು ಮುಂದುವರಿದರೆ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ ಮತ್ತು ಅಂತಹ ಚರ್ಚೆಗಳು ನಿಂತರೆ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತದೆ ಎಂದು ಅವರು ಹೇಳಿದರು.
"ನಾವು ಚರ್ಚೆಗಳನ್ನು ಬಯಸುತ್ತೇವೆ. ಬಿಜೆಪಿಯವರು ಕೇವಲ ಪ್ರಜಾಪ್ರಭುತ್ವದ ಬಾಡಿಗೆದಾರರು ಮತ್ತು ಮಾಲೀಕರಲ್ಲ ಎಂದು ಶಾ ಮತ್ತು ಶೆಹನ್‌ಶಾ ಅವರಿಗೆ ಸಲಹೆ ನೀಡುತ್ತೇನೆ. ಬಾಡಿಗೆದಾರರಾಗಿಯೇ ಉಳಿಯಿರಿ ಮತ್ತು ಭೂಮಾಲೀಕರಾಗಲು ಪ್ರಯತ್ನಿಸಬೇಡಿ ಎಂದು ಒತ್ತಾಯಿಸುತ್ತೇನೆ. ಪ್ರಜಾಪ್ರಭುತ್ವದ ಬಗ್ಗೆ ಯೋಚಿಸಲು ಪ್ರಾರಂಭಿಸಬೇಕು ಮತ್ತು ಅವರ ಸ್ನೇಹಿತರ ಬಗ್ಗೆ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಇಡೀ ಕೇಂದ್ರ ಸಚಿವ ಸಂಪುಟಕ್ಕೆ ಹೇಳಲು ಬಯಸುತ್ತೇನೆ ಎಂದು ಪವನ್ ಖೇರಾ ಹೇಳಿದರು.