ದೇಶ

ನನ್ನನ್ನು ಚಿಕ್ಕ ತಮ್ಮನಂತೆ ಪ್ರೀತಿಸಿ: ಪ್ರಧಾನಿಗೆ ಕೇಜ್ರಿವಾಲ್ ಸಲಹೆ!

Nagaraja AB

ನವದೆಹಲಿ: ನನ್ನನ್ನು ಚಿಕ್ಕ ತಮ್ಮನಂತೆ ಪ್ರೀತಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.

ಗೃಹ ಸಚಿವಾಲಯ ದೆಹಲಿ ಸರ್ಕಾರದ ಬಜೆಟ್ ಅನುಮೋದಿಸಿದ ನಂತರ ದೆಹಲಿ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ಒಳಿತು ಮಾಡಿದರೆ, ಮೊದಲ ಬಾರಿಗೆ ನಗರದ ಜನರ ಹೃದಯವನ್ನು ಅವರು ಗೆಲ್ಲಲಿದ್ದಾರೆ. ಇದು ಪ್ರಧಾನಿ ಮೋದಿಗೆ ನನ್ನ ಮಂತ್ರ. ನೀವು ನನ್ನ ದೊಡ್ಡಣ್ಣ, ನಾನು ನಿಮ್ಮ ಕಿರಿಯ ಸಹೋದರ, ನೀವು ಬೆಂಬಲಿಸಿದರೆ ನಾನು ಏನಾದರೂ ಮಾಡುತ್ತೇನೆ. ಚಿಕ್ಕ ತಮ್ಮನ ಹೃದಯ ಗೆಲ್ಲಲು ನೀವು ಬಯಸಿದರೆ, ನಿಮ್ಮನ್ನು ಪ್ರೀತಿಸುವುದಾಗಿ ಹೇಳಿದರು. 

ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಯಾವುದೇ ಕಚ್ಚಾಟಗಳಿಲ್ಲದಿದ್ದರೆ ದೆಹಲಿ 10 ಪಟ್ಟು ಹೆಚ್ಚು ಪ್ರಗತಿಯನ್ನು ಕಾಣುತ್ತಿತ್ತು. ದೆಹಲಿ ಸರ್ಕಾರ ಕೆಲಸ ಮಾಡಲು ಬಯಸುತ್ತದೆ ಹೊರತು ಹೋರಾಟವಲ್ಲ, ಹೋರಾಟವು ಯಾರಿಗೂ ಸೇವೆ ಸಲ್ಲಿಸುವುದಿಲ್ಲ. ನಾವು ಪ್ರಧಾನಿಯೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ, ನಾವು ಯಾವುದೇ ಜಗಳ ಬಯಸಲ್ಲ. ಕೇಂದ್ರದೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬಯಸಿದ್ದು, ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ತನನ್ನು ಬೆಂಬಲಿಸಿದರೆ, ಪ್ರತಿಯಾಗಿ ಏನನ್ನಾದರೂ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು. 

ಬಜೆಟ್ ಅನ್ನು ಇಂದು ಮಂಡಿಸಬೇಕಾಗಿತ್ತು. ಆದರೆ, ಕೇಂದ್ರ ಸರ್ಕಾರ ಅದಕ್ಕೆ ತಡೆಯನ್ನುಂಟು ಮಾಡಿತು. ನಾವು ಬಜೆಟ್‌ನಲ್ಲಿ ಯಾವುದೇ ಬದಲಾವಣೆ ಮಾಡದೆ ಕೇಂದ್ರ ಗೃಹ ಸಚಿವಾಲಯದ ಪ್ರಶ್ನೆಗಳಿಗೆ ಉತ್ತರಿಸಿದ್ದು, ಈಗ ಅವರು ಅದಕ್ಕೆ ಅನುಮೋದಿಸಿದ್ದಾರೆ. ನಾನು ಅವರಿಗೆ ತಲೆಬಾಗಬೇಕು ಎಂದು ಬಯಸಿದರು. ಇದು ಅವರ ಅಹಂಕಾರ ಹೊರತು ಬೇರೇನೂ ಅಲ್ಲ ಎಂದು ಕೇಜ್ರಿವಾಲ್ ಹೇಳಿದರು. 

SCROLL FOR NEXT