ಸಂಗ್ರಹ ಚಿತ್ರ 
ದೇಶ

ನ್ಯಾಯಾಧೀಶರ ನೇಮಕಾತಿಯಲ್ಲಿನ ವಿಳಂಬ ಅವರ ಜೇಷ್ಠತೆಗೆ ಭಂಗ ತರುತ್ತದೆ: ಸುಪ್ರೀಂ ಕೋರ್ಟ್ ಕೊಲಿಜಿಯಂ

ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಲಾದ ಹೆಸರುಗಳನ್ನು ತಡೆಹಿಡಿಯುವ ಅಥವಾ ಕಡೆಗಣಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಹಿಂದೆ ಶಿಫಾರಸು ಮಾಡಿದ ಅಭ್ಯರ್ಥಿಗಳ ಜೇಷ್ಠತೆಯ ನಷ್ಟವನ್ನು ಕೊಲಿಜಿಯಂ ಗಮನಿಸಿದ್ದು, ಇದು ಗಂಭೀರ ಕಳವಳದ ವಿಷಯವಾಗಿದೆ. ಇದು ಅವರ ಜೇಷ್ಠತೆಗೆ ಭಂಗ ತರುತ್ತದೆ ಎಂದು ಬುಧವಾರ ಹೇಳಿದೆ.

ನವದೆಹಲಿ: ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಲಾದ ಹೆಸರುಗಳನ್ನು ತಡೆಹಿಡಿಯುವ ಅಥವಾ ಕಡೆಗಣಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಹಿಂದೆ ಶಿಫಾರಸು ಮಾಡಿದ ಅಭ್ಯರ್ಥಿಗಳ ಜೇಷ್ಠತೆಯ ನಷ್ಟವನ್ನು ಕೊಲಿಜಿಯಂ ಗಮನಿಸಿದ್ದು, ಇದು ಗಂಭೀರ ಕಳವಳದ ವಿಷಯವಾಗಿದೆ. ಇದು ಅವರ ಜೇಷ್ಠತೆಗೆ ಭಂಗ ತರುತ್ತದೆ ಎಂದು ಬುಧವಾರ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ, ವಕೀಲ ಆರ್ ಜಾನ್ ಸತ್ಯನ್ ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸುವ ಶಿಫಾರಸನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ.

ಜನವರಿ 17 ರಂದು ಸತ್ಯನ್ ಅವರ ಹೆಸರನ್ನು ಕೊಲಿಜಿಯಂ ಪುನರುಚ್ಚರಿಸಿತು, ಆದರೆ ಸರ್ಕಾರವು ಇನ್ನೂ ನೇಮಕಾತಿಯನ್ನು ಅನುಮೋದಿಸಿಲ್ಲ. ತನ್ನ ಶಿಫಾರಸುಗಳನ್ನು ತಡೆಹಿಡಿಯಬಾರದು ಅಥವಾ ಕಡೆಗಣಿಸಬಾರದು ಎಂದು ಕೊಲಿಜಿಯಂ ಹೇಳಿದೆ.

ಇದು ಅವರ ಜೇಷ್ಠತೆಗೆ ಭಂಗ ತರುತ್ತದೆ. ಆದರೆ ಶಿಫಾರಸು ಮಾಡಿದವರು ನಂತರ ಅದರ ಪ್ರಯೋಜನ ಪಡೆಯುತ್ತಾರೆ. ಈ ಹಿಂದೆ ಶಿಫಾರಸು ಮಾಡಿದ ಅಭ್ಯರ್ಥಿಗಳ ಜೇಷ್ಠತೆಯ ನಷ್ಟವನ್ನು ಕೊಲಿಜಿಯಂ ಗಮನಿಸಿದೆ ಮತ್ತು ಇದು ಗಂಭೀರ ಕಳವಳದ ವಿಷಯವಾಗಿದೆ ಎಂದು ಅದು ಹೇಳಿದೆ.

ಮಂಗಳವಾರ ಕೊಲಿಜಿಯಂ ನಾಲ್ವರು ನ್ಯಾಯಾಂಗ ಅಧಿಕಾರಿಗಳಾದ ಆರ್ ಶಕ್ತಿವೇಲ್, ಪಿ ಧನಬಾಲ್, ಚಿನ್ನಸಾಮಿ ಕುಮಾರಪ್ಪನ್ ಮತ್ತು ಕೆ ರಾಜಶೇಖರ್ ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ಬಡ್ತಿ ಮಾಡುವ ಪ್ರಸ್ತಾಪವನ್ನು ಮಾಡಿತು.

ನೀಲಕಂದನ್ ನಂತರವೇ ರಾಜಶೇಖರ್ ಅವರಿಗೆ ಬಡ್ತಿ ನೀಡಬೇಕು. ಇಲ್ಲದಿದ್ದರೆ ನೀಲಕಂಡನಿಗಿಂತ ಕಿರಿಯ ನ್ಯಾಯಾಂಗ ಅಧಿಕಾರಿಯಾಗಿರುವ ರಾಜಶೇಖರ್ ಅವರು ನೀಲಕಂದನ್ ಅವರಿಗಿಂತ ಹಿರಿಯ ಶ್ರೇಣಿ ಹೊಂದಿದಂತಾಗುತ್ತದೆ. ಹಿರಿತನ ವಿಚಾರದಲ್ಲಿ ಅನ್ಯಾಯವಾದಂತಾಗುತ್ತದೆ ಎಂದು ಹೇಳಿದೆ. ಇದೇ ವೇಳೆ ಆರ್ ಜಾನ್ ಸತ್ಯನ್ ಮತ್ತು ರಾಮಸ್ವಾಮಿ ನೀಲಕಂದನ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ಬಡ್ತಿ ನೀಡುವುದರ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಲೇಖನ ಮತ್ತು 2017 ರಲ್ಲಿ ವೈದ್ಯಕೀಯ ಆಕಾಂಕ್ಷಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮತ್ತೊಂದು ಪೋಸ್ಟ್ ಒಂದನ್ನು ಸತ್ಯನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಸತ್ಯನ್ ಅವರ ಕಡವನ್ನು ಕೇಂದ್ರ ಸರ್ಕಾರ ಹಿಂತಿರುಗಿಸಿತ್ತು.

ಈ ವಿಚಾರವನ್ನು ಪ್ರಸ್ತಾಪಿಸಿದ ಕೊಲಿಜಿಯಂ ಸತ್ಯನ್ ಅವರು ಉತ್ತಮ ವೈಯಕ್ತಿಕ ಮತ್ತು ವೃತ್ತಿಪರ ಹಿನ್ನೆಲೆಯನ್ನು ಹೊಂದಿದ್ದಾರೆಂಬ ಗುಪ್ತಚರ ಬ್ಯೂರೋದ ವರದಿಯನ್ನು ಉಲ್ಲೇಖಿಸಿತು. ಸತ್ಯನ್ ಅವರು ಮಾಡಿದ ಪೋಸ್ಟ್‌ಗಳು ಹೈಕೋರ್ಟ್ ನ್ಯಾಯಾಧೀಶರಾಗಲು ಅವರ ಯೋಗ್ಯತೆ, ಪಾತ್ರ ಅಥವಾ ಸಮಗ್ರತೆಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿತು.

"ಈ ದೃಷ್ಟಿಕೋನದಲ್ಲಿ, ಆರ್. ಜಾನ್ ಸತ್ಯನ್ ಅವರು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಯೋಗ್ಯರು ಮತ್ತು ಸೂಕ್ತರು ಎಂದು ಕೊಲಿಜಿಯಂ ಹೇಳಿತು.

ನಾಲ್ವರು ನ್ಯಾಯಾಂಗ ಅಧಿಕಾರಿಗಳನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಲು 2022ರ ಆಗಸ್ಟ್ 10ರಂದು ಹೈಕೋರ್ಟ್ ಕೊಲಿಜಿಯಂ ಮಾಡಿದ ಶಿಫಾರಸಿಗೆ ತಮಿಳುನಾಡು ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಸಮ್ಮತಿ ಇದೆ ಎಂದು ಕೊಲಿಜಿಯಂ ತನ್ನ ನಿರ್ಣಯದಲ್ಲಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT