ದೇಶ

ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಗಳು ಈಗ ದೇಶದಾದ್ಯಂತ ಪ್ರತಿಧ್ವನಿಸುತ್ತವೆ: ಪ್ರಿಯಾಂಕಾ ಗಾಂಧಿ

Ramyashree GN

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಜನರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಮತ್ತು ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಗಳು ಈಗ ದೇಶದಾದ್ಯಂತ ಪ್ರತಿಧ್ವನಿಸುತ್ತವೆ ಎಂದಿದ್ದಾರೆ.

ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಪ್ರಿಯಾಂಕಾ, ಸಂಸತ್ತಿನ ಕಲಾಪಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 'ಈ ಪ್ರಶ್ನೆಗಳಿಂದಾಗಿ ರಾಹುಲ್ ಗಾಂಧಿಯ ಮೇಲೆ ದಾಳಿ ನಡೆಯುತ್ತಿದೆ. ಜನರಿಂದ ಆಯ್ಕೆಯಾದ ಸಾರ್ವಜನಿಕ ಸೇವಕರು ಜನರ ಪರವಾಗಿ ಪ್ರಶ್ನೆಗಳನ್ನು ಎತ್ತಿದಾಗ, ಅದಾನಿ-ಸೇವಕರು ಅವರ ಧ್ವನಿಯನ್ನು ಹತ್ತಿಕ್ಕಲು ಸಂಚು ಮಾಡಿದರು' ಎಂದು ಬರೆದಿದ್ದಾರೆ.
ಮೋದಿ ಸರ್ಕಾರವು ಜನರಿಗೆ ಉತ್ತರಿಸಬೇಕು ಎಂದು ಅವರು ಹೇಳಿದರು.

ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಪ್ರಿಯಾಂಕಾ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಮೋದಿ, ನಿಮ್ಮನ್ನು ಹೊಗಳುವರು ಹುತಾತ್ಮ ಪ್ರಧಾನಿ (ರಾಜೀವ್ ಗಾಂಧಿ) ಅವರ ಮಗನನ್ನು ದೇಶದ್ರೋಹಿ, ಮೀರ್ ಜಾಫರ್ ಎಂದು ಕರೆದರು....' ಎಂದಿದ್ದಾರೆ.

ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಗಾಂಧಿ ಕುಟುಂಬ ಮತ್ತು ಇಡೀ ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸಿದ್ದಾರೆ. ಆದರೆ, ಯಾವುದೇ ನ್ಯಾಯಾಧೀಶರು ಅವರಿಗೆ ಎರಡು ವರ್ಷಗಳ ಶಿಕ್ಷೆಯನ್ನು ನೀಡಿಲ್ಲ ಮತ್ತು ಸಂಸತ್ತಿನಿಂದ ಅನರ್ಹಗೊಳಿಸಿಲ್ಲ ಎಂದು ಅವರು ಹೇಳಿದರು.

'ನಿಮ್ಮ ಸ್ನೇಹಿತ ಗೌತಮ್ ಅದಾನಿ ದೇಶದ ಸಂಸತ್ತು ಮತ್ತು ನಾಗರಿಕರಿಗಿಂತ ಶ್ರೇಷ್ಠರೇ?. ನೀವು ಹಾಳುಮಾಡಲು ಯತ್ನಿಸುತ್ತಿರುವ ಪ್ರಜಾಪ್ರಭುತ್ವವು ನನ್ನ ಕುಟುಂಬದ ರಕ್ತದಿಂದ ನೀರಾವರಿಯಾಗಿದೆ. ನಮ್ಮ ಕುಟುಂಬವು ಭಾರತೀಯರ ಧ್ವನಿಯನ್ನು ಎತ್ತಿದೆ ಮತ್ತು ತಲೆಮಾರುಗಳಿಂದ ಸತ್ಯಕ್ಕಾಗಿ ಹೋರಾಡಿದೆ. ನಾವು ಎಂದಿಗೂ ಹೇಡಿ, ಅಧಿಕಾರ ದಾಹದ ಸರ್ವಾಧಿಕಾರಿಯ ಮುಂದೆ ತಲೆಬಾಗಿಲ್ಲ ಮತ್ತು ಮುಂದೆಯೂ ಹಾಗೆ ಮಾಡುವುದಿಲ್ಲ' ಎಂದು ಅವರು ಟ್ವೀಟ್ ಮಾಡಿದ್ದಾರೆ.

SCROLL FOR NEXT