ದೇಶ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚೀತಾ

Lingaraj Badiger

ಕುನೋ: ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ 8 ಚೀತಾಗಳಲ್ಲಿ ಒಂದಾದ ಸಿಯಾಯಾ ಎಂಬ ಚೀತಾ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.

ನಮೀಬಿಯಾದಿಂದ ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ತರಲಾಗಿತ್ತು. ಇದೀಗ ಒಂದು ಚೀತಾ 4 ಮರಿಗಳಿಗೆ ಜನ್ಮ ನೀಡಿರುವ ಮಾಹಿತಿಯನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ನೀಡಿದ್ದಾರೆ ಮತ್ತು ಮರಿಗಳ ಮುದ್ದಾದ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಭಿನಂದನೆಗಳು, 'ಅಮೃತ್ ಕಾಲ'ದ ಸಮಯದಲ್ಲಿ ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ ಇದು ಒಂದು ಮಹತ್ವದ ಘಟನೆ ಎಂದು ಕೇಂದ್ರ ಸಚಿವರು ಬಣ್ಣಿಸಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ 2022ರ ಸೆಪ್ಟೆಂಬರ್ 17 ರಂದು ಭಾರತಕ್ಕೆ ಸ್ಥಳಾಂತರಗೊಂಡ ಚೀತಾಗಳಲ್ಲಿ ಒಂದು ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಹೇಳಲು ತುಂಬಾ ಸಂತೋಷವಾಗುತ್ತಿದೆ" ಎಂದು ಭೂಪೇಂದರ್ ಯಾದವ್ ಅವರು ಟ್ವೀಟ್ ಮಾಡಿದ್ದಾರೆ.

2022 ರಲ್ಲಿ, ನಮೀಬಿಯಾದಿಂದ ಎಂಟು ಚಿರತೆಗಳನ್ನು ತರಲಾಯಿತು ಮತ್ತು ಭಾರತದ ಪ್ರಾಜೆಕ್ಟ್ ಚೀತಾದ ಭಾಗವಾಗಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಯಿತು, ಇದು ದೇಶದಲ್ಲಿ ಆಫ್ರಿಕಾದ ಚೀತಾಗಳ ಒಂದು ಸಣ್ಣ ಜನಸಂಖ್ಯೆಯನ್ನು ಪರಿಚಯಿಸುವ ಮತ್ತು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.

SCROLL FOR NEXT