ದೇಶ

ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿಗೆ ಶಿಕ್ಷೆ: 'ನೋ ಕಾಮೆಂಟ್ಸ್‌' ಎಂದ ನಿತೀಶ್‌ ಕುಮಾರ್‌

Lingaraj Badiger

ಪಾಟ್ನಾ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್, “ಒಂದು ವಿಷಯ ಕೇಳಿ, ನಾನು ನ್ಯಾಯಾಲಯದಲ್ಲಿ ಬಾಕಿ ಇರುವ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ ಎಂಬುದು ನಿಮಗೆಲ್ಲರಿಗೂ ತಿಳಿದಿರಲಿ. ಅದು ಎಫ್‌ಐಆರ್‌ ಹಂತದಲ್ಲಿದ್ದರೂ, ನಾನು ಮಾತನಾಡದಿರಲು ಅಥವಾ ಯಾವುದೇ ಕಾಮೆಂಟ್‌ಗಳನ್ನು ಮಾಡಲು ಇಷ್ಟಪಡುವುದಿಲ್ಲ. ಇತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಆದರೆ ನಾನು ಕಾಮೆಂಟ್ ಮಾಡದಿರಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಬಿಜೆಪಿ ಜತೆ ಮೈತ್ರಿ ಮುರಿದುಕೊಂಡ ನಿತೀಶ್ ಕುಮಾರ್ ಅವರು, ಕಾಂಗ್ರೆಸ್ ಮಿತ್ರಪಕ್ಷವಾಗಿರುವ ಮಹಾಮೈತ್ರಿಕೂಟ ಸರ್ಕಾರವನ್ನು ರಚಿಸಿದ್ದರು.

ಪ್ರತಿಪಕ್ಷಗಳ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಬಿಹಾರ ಸಿಎಂ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡುವ ಒಗ್ಗಟ್ಟಿನ ಪ್ರತಿಪಕ್ಷದ ಪರವಾಗಿ ಹಲವು ಪ್ರಾದೇಶಿಕ ಪಕ್ಷಗಳು ಒಲವು ತೋರಿರುವುದರಿಂದ ಈಗಾಗಲೇ ವಿರೋಧ ಪಕ್ಷಗಳೊಂದಿಗೆ ಎರಡು ಸುತ್ತಿನ ಚರ್ಚೆ ನಡೆಸಿದ್ದೇನೆ ಎಂದರು.

"ನಾವು ಕಾಯುತ್ತಿದ್ದೇವೆ. ಕಾಂಗ್ರೆಸ್ ಒಪ್ಪಿದರೆ ಇನ್ನಷ್ಟು ಪಕ್ಷಗಳು ವಿರೋಧ ಪಕ್ಷಗಳ ಜೊತೆ ಕೈಜೋಡಿಸಲಿವೆ'' ಎಂದರು.

SCROLL FOR NEXT