14 ಆ್ಯಪ್‌ಗಳ ಮೇಲೆ ನಿಷೇಧ 
ದೇಶ

ಮಹತ್ವದ ಕಾರ್ಯಾಚರಣೆ: ಭಯೋತ್ಪಾದಕ ರಹಸ್ಯ ಸಂದೇಶಗಳಿಗೆ ಬಳಕೆ; 14 ಆ್ಯಪ್‌ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ

ಭಯೋತ್ಪಾದಕ ರಹಸ್ಯ ಸಂದೇಶಗಳಿಗೆ ಬಳಕೆ ಮಾಡಲಾಗುತ್ತಿದ್ದ ಆರೋಪದ ಮೇರೆಗೆ 14 ಆ್ಯಪ್‌ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ನವದೆಹಲಿ: ಭಯೋತ್ಪಾದಕ ರಹಸ್ಯ ಸಂದೇಶಗಳಿಗೆ ಬಳಕೆ ಮಾಡಲಾಗುತ್ತಿದ್ದ ಆರೋಪದ ಮೇರೆಗೆ 14 ಆ್ಯಪ್‌ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಹೌದು.. ಪಾಕಿಸ್ತಾನದ ಉಗ್ರರಿಗೆ ರಹಸ್ಯ ಸಂದೇಶ ಕಳುಹಿಸಲು ಜಮ್ಮು& ಕಾಶ್ಮೀರದ ಕಣಿವೆ ಪ್ರದೇಶದ ಭಯೋತ್ಪಾದಕ ಗುಂಪುಗಳು ಬಳಸುತ್ತಿದ್ದ 14 ಮೆಸೆಂಜರ್ ಆ್ಯಪ್‌ ಗಳನ್ನು ಕೇಂದ್ರ ಸರ್ಕಾರ ಸೋಮವಾರ ನಿರ್ಬಂಧಿಸಿದೆ. 

ಮೂಲಗಳ ಪ್ರಕಾರ ಎನಿಗ್ಮಾ (Enigma), ಸೇಫ್‌ವಿಸ್ (Safeswiss), ವಿಕ್ರ್ಮೆ(Wickrme), ಮೀಡಿಯಾಫೈರ್(Mediafire), ಕ್ರಿಪ್‌ವೈಸರ್(Crypviser), ಬ್ರಿಯಾರ್(Briar), ಬಿಚಾಟ್(BChat), ನಂಡ್‌ಬಾಕ್ಸ್(Nandbox), ಕೊನಿಯನ್(Conion), ಐಎಂಒ(IMO), ಜಂಗಿ(Zangi), ಥ್ರೀಮಾ (Threema) ಎಲಿಮೆಂಟ್  (Element) ಮತ್ತು ಸೆಕೆಂಡ್ ಲೈನ್ (Second Line) ಆ್ಯಪ್‌ ಗಳನ್ನು ನಿಷೇಧಿಸಿದೆ. ಈ ಆ್ಯಪ್‌ ಗಳು ಕಣಿವೆಯಲ್ಲಿ ಭಯೋತ್ಪಾದಕ ಕುರಿತಾದ ಪ್ರಚಾರವನ್ನು ಮಾಡುತ್ತಿತ್ತು. ಈ ಆ್ಯಪ್‌ಗಳ ಮೂಲಕ ಉಗ್ರರು ರಹಸ್ಯ ಸಂದೇಶಗಳನ್ನು ಕಣಿವೆಯಲ್ಲಿರುವ ತನ್ನ ಕಾರ್ಯಕರ್ತರಿಗೆ ಕಳುಹಿಸುತ್ತಿದ್ದರು ಎಂದು ವರದಿ ತಿಳಿಸಿದೆ.

ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದ್ದು, ಈ ಆ್ಯಪ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ನಿರ್ಬಂಧಿಸಲಾಗಿದೆ. 

ದೇಶದ ಭದ್ರತೆಗೆ ಧಕ್ಕೆ ತರುವ ಮೊಬೈಲ್ ಅಪ್ಲಿಕೇಷನ್ ಗಳ ಮೇಲೆ ನಿಷೇಧ ಹೇರಿರುವುದು ಇದೇ ಮೊದಲಲ್ಲ. ಈ ಹಿಂದೆ ಚೀನಾದ ಹಲವು ಅಪ್ಲಿಕೇಷನ್ ಗಳನ್ನು ಸರ್ಕಾರ ನಿಷೇಧಿಸಿದೆ. ಟಿಕ್‌ ಟಾಕ್‌, ಶೇರ್‌ ಚಾಟ್‌, ಹೆಲೋ, ಲೈಕಿ, ಯುಸಿ ನ್ಯೂಸ್‌, ಬಿಗೋ ಲೈವ್, ಯುಸಿ ಬ್ರೌಸರ್, ಜೆಂಡರ್‌, ಕ್ಯಾಮ್‌ ಸ್ಕ್ಯಾನರ್‌, ಪಬ್‌ ಜಿ, ಫ್ರೀ ಫೈರ್‌ ನಂತರ ಜನಪ್ರಿಯ ಮುಂತಾದ ಜನಪ್ರಿಯ ಮೊಬೈಲ್ ಗೇಮ್‌, ಹಾಗೂ ಆ್ಯಪ್‌ ಸೇರಿದಂತೆ 200 ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು