ಆನೆಗಳಿಗೆ ದಾರಿ ಮಾಡಿಕೊಟ್ಟ ಹುಲಿ 
ದೇಶ

Viral Video: ಮಾರ್ಗಮಧ್ಯೆ ಬಂದ ಆನೆಗಳಿಗೆ ದಾರಿ ಮಾಡಿಕೊಟ್ಟ ಹುಲಿ, ವನ್ಯಜೀವಿಗಳ ಅದ್ಭುತ ಹೊಂದಾಣಿಕೆಯ ವಿಡಿಯೋ ವೈರಲ್

ದಾರಿಯಲ್ಲಿ ಹೋಗುತ್ತಿದ್ದಾಗ ದಿಢೀರನೆ ಬಂದ ಆನೆಗಳ ಹಿಂಡಿಗೆ ಹುಲಿಯೊಂದು ದಾರಿ ಮಾಡಿಕೊಟ್ಟಿರುವ ಘಟನೆ ನಡೆದಿದ್ದು, ಪ್ರಾಣಿಪ್ರಿಯರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಬೆಂಗಳೂರು: ದಾರಿಯಲ್ಲಿ ಹೋಗುತ್ತಿದ್ದಾಗ ದಿಢೀರನೆ ಬಂದ ಆನೆಗಳ ಹಿಂಡಿಗೆ ಹುಲಿಯೊಂದು ದಾರಿ ಮಾಡಿಕೊಟ್ಟಿರುವ ಘಟನೆ ನಡೆದಿದ್ದು, ಪ್ರಾಣಿಪ್ರಿಯರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಸಾಮಾನ್ಯವಾಗಿ ಹುಲಿಗಳು ಬೇಟೆಯಾಡಲು ಹಿಂದೆ ಮುಂದೆ ನೋಡಲ್ಲ ಎನ್ನಲಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಹುಲಿಯೊಂದು ಆನೆಗಳ ಹಿಂಡಿಗೆ ಏನೂ ಮಾಡದೆ ಸುಮ್ಮನೆ ಕುಳಿತು ದಾರಿ ಮಾಡಿಕೊಟ್ಟಿದೆ. ಈ ಘಟನೆ ಎಲ್ಲಿ ನಡೆಯಿತು ಎಂಬುದರ ಕುರಿತು ಮಾಹಿತಿ ಇಲ್ಲ.. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. 

ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವಿಜೇತ ಸಿಂಹಾ ಎಂಬುವವರು ಸೆರೆ ಹಿಡಿದಿರುವ ಈ ವಿಡಿಯೋಗೆ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ರಾಜಗಾಂಭೀರ್ಯದಿಂದ ಹೋಗುತ್ತಿದ್ದ ಹುಲಿ, ಆನೆಗಳ ಹಿಂಡು ಬರುತ್ತಿದೆ ಅನ್ನೋದನ್ನು ಗಮನಿಸುತ್ತಿದ್ದಂತೆ ಅಲ್ಲೇ ಅವಿತು ಕುಳಿತು ಅವುಗಳಿಗೆ ದಾರಿ ಮಾಡಿಕೊಡುತ್ತದೆ. ಈ ವಿಡಿಯೋ ಬಗ್ಗೆ ‘ಪ್ರಾಣಿಗಳು ಹೇಗೆ ಸಂವಹನ ನಡೆಸುತ್ತವೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತವೆ. ಹುಲಿಯು ಆನೆಗಳು ಬರುತ್ತಿರುವ ವಾಸನೆ ತಿಳಿದು ಅವುಗಳ ಹಿಂಡಿಗೆ ದಾರಿ ಮಾಡಿಕೊಡುತ್ತದೆ’ ಎಂದು ಸುಸಂತ ನಂದಾ ಬರೆದುಕೊಂಡಿದ್ದಾರೆ.

ಅನೇಕರು ಈ ವಿಡಿಯೋಗೆ ವಿವಿಧ ಕಾಮೆಂಟ್ ಹಾಕಿದ್ದು, ‘ಹುಲಿಯು ಪ್ರಬಲವಾದ ಪ್ರಾಣಿಗಳಿಗೆ ಸರಿಯಾದ ಗೌರವವನ್ನು ನೀಡುತ್ತದೆ’ ಎಂದು ಒಬ್ಬರು ಹೇಳಿದ್ರೆ ಇನ್ನೊಬ್ಬರು, ‘ಎಂತಹ ಸುಂದರ ದೃಶ್ಯ. ಹುಲಿ ಆನೆಗಳ ಹಿಂಡಿಗೆ ಹೇಗೆ ದಾರಿ ಮಾಡಿಕೊಟ್ಟಿರೋದು ಇಷ್ಟವಾಯಿತು’ ಎಂದು ಹೇಳಿದ್ದಾರೆ.

ಹುಲಿಗಳು ಸಾಮಾನ್ಯವಾಗಿ ಜಿಂಕೆ, ಮಂಗಗಳು ಮತ್ತು ಹಂದಿಗಳಂತಹ ದೊಡ್ಡ ಅಥವಾ ಮಧ್ಯಮ ಗಾತ್ರದ ಸಸ್ತನಿಗಳನ್ನು ಬೇಟೆಯಾಡುತ್ತವೆ. ಬೃಹತ್ ಗಾತ್ರದ ಆನೆಗಳನ್ನು ಹುಲಿಗಳು ಬೇಟೆಯಾಡುವ ನಿದರ್ಶನಗಳು ತುಂಬಾನೇ ಅಪರೂಪ. ‘ಹೊಟ್ಟೆ ತುಂಬಿದ್ದಾಗ ಹುಲಿಗಳು ದಾಳಿ ಮಾಡೋದಿಲ್ಲ, ತಮಗೆ ಅಭದ್ರತೆ ಕಾಡಿದಾಗ ಮತ್ತು ಹಸಿವು ಇದ್ದಾಗ ಮಾತ್ರ ಬೇಟೆಯಾಡುತ್ತವೆ’ ಅಂತಾ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಬರಹದಲ್ಲೂ ಉಲ್ಲೇಖ ಮಾಡಿರುವುದನ್ನು ಕಾಣಬಹುದು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT