ಸಂಗ್ರಹ ಚಿತ್ರ 
ದೇಶ

ಓದಿರೋದು 12ನೇ ತರಗತಿ; ಸೈಬರ್ ಕ್ರೈಮ್ ಮೂಲಕ ದಿನಕ್ಕೆ 5 ಕೋಟಿ ರೂ. ವಹಿವಾಟು ನಡೆಸುತ್ತಿದ್ದ ವ್ಯಕ್ತಿ ಅಂದರ್!

12ನೇ ತರಗತಿಗೆ ವಿದ್ಯಾಭ್ಯಾಸ ಬಿಟ್ಟು ಸೈಬರ್ ಅಪರಾಧಗಳ ಮೂಲಕ ತನ್ನ ಖಾತೆಯಲ್ಲಿ ದಿನಕ್ಕೆ 5 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದ ಕಿಂಗ್‌ಪಿನ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ಮುಂಬೈ: 12ನೇ ತರಗತಿಗೆ ವಿದ್ಯಾಭ್ಯಾಸ ಬಿಟ್ಟು ಸೈಬರ್ ಅಪರಾಧಗಳ ಮೂಲಕ ತನ್ನ ಖಾತೆಯಲ್ಲಿ ದಿನಕ್ಕೆ 5 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದ ಕಿಂಗ್‌ಪಿನ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ಪೊಲೀಸ್ ಸಿಬ್ಬಂದಿಯಂತೆ ನಟಿಸಿ ದೇಶಾದ್ಯಂತ ಜನರ ಹಣ ದೋಚುತ್ತಿದ್ದ ಸೈಬರ್ ಕ್ರಿಮಿನಲ್‌ಗಳ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಸೀಮಿತ ಶಿಕ್ಷಣದ ಹೊರತಾಗಿಯೂ ಉತ್ತಮ ತಾಂತ್ರಿಕ ಜ್ಞಾನ ಹೊಂದಿದ್ದ ಮಾಸ್ಟರ್ ಮೈಂಡ್ 49 ವರ್ಷದ ಶ್ರೀನಿವಾಸ್ ರಾವ್ ದಾದಿ ಎಂಬಾತನನ್ನು ಬಂಗೂರ್ ನಗರ ಪೊಲೀಸ್ ಠಾಣೆಯ ತಂಡವು ಹೈದರಾಬಾದ್‌ನ ಐಷಾರಾಮಿ ಹೋಟೆಲ್‌ನಿಂದ ಕಸ್ಟಡಿಗೆ ತೆಗೆದುಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶ್ರೀನಿವಾಸ್ ರಾವ್ ದಾದಿ ಜೊತೆಗೆ ಥಾಣೆಯಲ್ಲಿ ಇಬ್ಬರು ಮತ್ತು ಕೋಲ್ಕತ್ತಾದ ಕೆಲವರು ಸೇರಿದಂತೆ ಆತನ ಗ್ಯಾಂಗ್‌ನ ಇನ್ನೂ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಹೇಳಿದರು. ದಾದಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವಂತೆ ನಟಿಸುತ್ತಿದ್ದನು. ಈತ ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದನು. ಪೊಲೀಸರು ಇದುವರೆಗೆ ದಾದಿ ಬಳಸಿದ 40 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಆತನಿಂದ 1.5 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೈಬರ್ ವಂಚಕರ ಕಾರ್ಯವೈಖರಿಯನ್ನು ವಿವರಿಸಿದ ಅಧಿಕಾರಿಯೊಬ್ಬರು, ದಾದಿ ಮತ್ತು ಅವನ ಸಹಚರರು ಜನರನ್ನು, ಹೆಚ್ಚಾಗಿ ಮಹಿಳೆಯರನ್ನು ಪೋಲೀಸ್ ಅಧಿಕಾರಿಗಳಂತೆ ಸಂಪರ್ಕಿಸಿ ಅವರು ಕಳುಹಿಸಿದ ಕೊರಿಯರ್‌ನಲ್ಲಿ ಪೊಲೀಸರು ಡ್ರಗ್ಸ್ ಅಥವಾ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿಸುತ್ತಾರೆ. ನಂತರ ಕರೆ ಮಾಡಿ ನಿಮ್ಮ ಬ್ಯಾಂಕ್ ಅಥವಾ ಆದಾಯ ತೆರಿಗೆ ಸಂಬಂಧಿತ ವಿವರಗಳನ್ನು ಕೇಳುತ್ತಾರೆ. ಪೊಲೀಸರಿಂದ ಕರೆ ಬಂದಿದೆ ಎಂದರೆ ಹೆಚ್ಚಾಗಿ ಜನರು ಭಯಭೀತರಾಗುತ್ತಾರೆ. ಅಲ್ಲದೆ ತಮ್ಮ ಬ್ಯಾಂಕ್ ಅಥವಾ ಐಟಿ ವಿವರಗಳನ್ನು ಹಂಚಿಕೊಳ್ಳುತ್ತಾರೆ ಎಂದು ಉಪ ಪೊಲೀಸ್ ಆಯುಕ್ತ (ವಲಯ -11) ಅಜಯ್ ಕುಮಾರ್ ಬನ್ಸಾಲ್ ಹೇಳಿದ್ದಾರೆ.

ನಂತರ ಸಂತ್ರಸ್ತರು OTP ಅನ್ನು ಸಹ ಹಂಚಿಕೊಳ್ಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಸುವ ಮೂಲಕ ವಂಚಕರು ಅವರು  ಮೊಬೈಲ್ ಫೋನ್‌ಗಳನ್ನು ನಿಯಂತ್ರಿಸುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಮುಖ ವಿವರಗಳನ್ನು ಪ್ರವೇಶಿಸಿದ ನಂತರ, ವಂಚಕರು ಸಂತ್ರಸ್ತರು ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯುತ್ತಾರೆ. ಸೈಬರ್ ಗ್ಯಾಂಗ್ ಈ ವಿಧಾನವನ್ನು ಉಪಯೋಗಿಸಿಕೊಂಡು ದೇಶಾದ್ಯಂತ ಸಾವಿರಾರು ಜನರನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ಹೇಳಿದರು.

ಗ್ಯಾಂಗ್ ದೋಚಿದ ಎಲ್ಲಾ ಹಣ ದಾದಿ ನಿರ್ವಹಿಸುತ್ತಿದ್ದ ಬ್ಯಾಂಕ್ ಖಾತೆಗಳಿಗೆ ಕಳುಹಿಸುತ್ತಿದ್ದರು. ಈ ಖಾತೆಗಳಲ್ಲಿ ದಿನಕ್ಕೆ 5 ಕೋಟಿಯಿಂದ 10 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ದಾದಿ ನಂತರ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ಚೀನಾದ ಪ್ರಜೆಗೆ ವರ್ಗಾಯಿಸುತ್ತಾರೆ ಎಂದು ಅಧಿಕಾರಿ ಹೇಳಿದರು.

ಪ್ರಕರಣದ ತನಿಖೆಗಾಗಿ, ನಗರ ಪೊಲೀಸ್ ತಂಡಗಳು ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಜಾರ್ಖಂಡ್, ಹರಿಯಾಣ ಮತ್ತು ಮಹಾರಾಷ್ಟ್ರದ ಇತರ ಸ್ಥಳಗಳಲ್ಲಿವೆ. ಹೆಚ್ಚಿನ ಬಂಧನಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT