ದೇಶ

ಅಬಕಾರಿ ನೀತಿ: ಇಬ್ಬರು ಆರೋಪಿಗಳಿಗೆ ಜಾಮೀನು; ಬಿಜೆಪಿ ಕ್ಷಮೆಯಾಚಿಸಲು ಎಎಪಿ ಆಗ್ರಹ

Nagaraja AB

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ  ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದ ನಂತರ ಪಕ್ಷದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿರುವ ಬಿಜೆಪಿ ಕ್ಷಮೆಯಾಚಿಸಬೇಕು ಎಂದು ಆಮ್ ಆದ್ಮಿ ಪಕ್ಷ ಭಾನುವಾರ ಒತ್ತಾಯಿಸಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿ ಕ್ಯಾಬಿನೆಟ್ ಸಚಿವರಾದ ಅತಿಶಿ, ಮದ್ಯದ ಉದ್ಯಮಿಗಳಿಂದ 100 ಕೋಟಿ ರೂಪಾಯಿ ಕಿಕ್‌ಬ್ಯಾಕ್ ಸ್ವೀಕರಿಸಲಾಗಿದೆ ಮತ್ತು ಗೋವಾ ಚುನಾವಣೆಯಲ್ಲಿ ಹಣವನ್ನು ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪ ಮಾಡಿದೆ. "ನಿನ್ನೆ ರೋಸ್ ಅವೆನ್ಯೂ ನ್ಯಾಯಾಲಯ ರಾಜೇಶ್ ಜೋಶಿ ಮತ್ತು ಗೌತಮ್ ಮಲ್ಹೋತ್ರಾ ಅವರಿಗೆ ಜಾಮೀನು ನೀಡಿದೆ. ಲಂಚ ಅಥವಾ ಕಿಕ್‌ಬ್ಯಾಕ್‌ ಸಂಬಂಧ ನಗದು ಪಾವತಿ ತೋರಿಸುವ ಯಾವುದೇ ಪುರಾವೆಗಳನ್ನು ಇಡಿ ಇಟ್ಟಿಲ್ಲ ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಲಾಗಿದೆ. ಸಾಕ್ಷಿಗಳ ಕೆಲವು ಅಸ್ಪಷ್ಟ ಹೇಳಿಕೆಗಳನ್ನು ಇಡಿ ಲಗತ್ತಿಸಿರುವುದಾಗಿ ಆದೇಶದಲ್ಲಿ ತಿಳಿಸಿರುವುದಾಗಿ ಸಚಿವರು ಹೇಳಿದರು. 

ಇಡೀ ಪ್ರಕರಣ ಬೋಗಸ್  ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.  "ಕಿಕ್‌ಬ್ಯಾಕ್ ಅಥವಾ ಹಣ ವರ್ಗಾವಣೆ ಸಂಬಂಧ ಯಾವುದೇ ಸಾಕ್ಷಿ ಇಲ್ಲ ಎಂದು ಈಗ ಕೋರ್ಟ್ ಕೂಡಾ ಹೇಳಿದೆ. ಇಡೀ ಮದ್ಯ ಹಗರಣ ಬೋಗಸ್ ಮತ್ತು ಎಎಪಿ ಸರ್ಕಾರದ ಹೆಸರು ಕೆಡಿಸಲು ಮಾಡಲಾಗುತ್ತಿರುವ ಆರೋಪ ಎಂದು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇವೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 

SCROLL FOR NEXT