ದೇಶ

ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಪಿತೂರಿ ಕೇಸು: ಜಮ್ಮು-ಕಾಶ್ಮೀರದ ಏಳು ಜಿಲ್ಲೆಗಳಲ್ಲಿ ಎನ್ಐಎ ದಾಳಿ

Sumana Upadhyaya

ನವದೆಹಲಿ:ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಪಿತೂರಿ ಕೇಸಿನಲ್ಲಿ ಜಮ್ಮು-ಕಾಶ್ಮೀರದ ಏಳು ಜಿಲ್ಲೆಗಳಲ್ಲಿ 15 ಸ್ಥಳಗಳಲ್ಲಿ ಇಂದು ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಶೋಧಕಾರ್ಯ ನಡೆಸಿದೆ.

ಜಮ್ಮುವಿನ ಅನಂತ್ ನಾಗ್ ಜಿಲ್ಲೆಯ ನಾಲ್ಕು ಕಡೆಗಳಲ್ಲಿ, ಶೋಪಿಯಾನ್ ನ ಮೂರು ಕಡೆಗಳಲ್ಲಿ, ಬುದ್ಗಾಮ್, ಶ್ರೀನಗರ ಮತ್ತು ಪೂಂಚ್ ಜಿಲ್ಲೆಗಳ ತಲಾ ಎರಡು ಕಡೆಗಳಲ್ಲಿ, ಬಾರಾಮುಲ್ಲಾ, ರಜೌರಿ ಜಿಲ್ಲೆಗಳ ತಲಾ ಒಂದು ಕಡೆಗಳಲ್ಲಿ ಕೇಂದ್ರ ತನಿಖಾ ಸಂಸ್ಥೆ ಶೋಧ ನಡೆಸಿದೆ.

ಭಯೋತ್ಪಾದಕರ ಪಿತೂರಿ ಕೇಸಿನಲ್ಲಿ ಕಳೆದ ವರ್ಷ ಜೂನ್ 21ರಂದು ಎನ್ಐಎ ಸ್ವಯಂಪ್ರೇರಿತ ಕೇಸು ದಾಖಲಿಸಿತ್ತು. ಪಾಕಿಸ್ತಾನ ಬೆಂಬಲದೊಂದಿಗೆ ಲಷ್ಕರ್ ಇ ತೊಯ್ಬಾ(LeT), ಜೈಶ್ ಇ ಮೊಹಮ್ಮದ್(JeM), ಹಿಜ್ಬುಲ್ ಮುಜಾಹಿದ್ದೀನ್(HM), ಅಲ್-ಬದರ್ ಮತ್ತು ಅಲ್ ಖೈದಾ ಭಯೋತ್ಪಾದಕ ಸಂಘಟನೆಗಳು ಪಿತೂರಿ ನಡೆಸಿ ಭಯೋತ್ಪಾದಕ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸುತ್ತಿವೆ ಎಂದು ಗುರುತಿಸಲಾಗಿದೆ.

SCROLL FOR NEXT