ದೇಶ

ಇಡಬ್ಲ್ಯುಎಸ್ ಗೆ ಶೇ.10 ರಷ್ಟು ಕೋಟ ತೀರ್ಪು ಪರುಪರಿಶೀಲನೆಗೆ ಆಗ್ರಹ: ಸುಪ್ರೀಂ ನಲ್ಲಿ ಅರ್ಜಿ ವಜಾ

Srinivas Rao BV

ನವದೆಹಲಿ: ಆರ್ಥಿಕವಾಗಿ ಹಿಂದುಳಿದಿರುವ (ಇಡಬ್ಲ್ಯುಎಸ್) ವರಿಗೆ ಉದ್ಯೋಗದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ಆದೇಶವನ್ನು ಮರುಪರಿಶೀಲನೆ ಮಾಡಬೇಕೆಂದು ಮನವಿ ಮಾಡಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸಂವಿಧಾನಕ್ಕೆ ತಿದ್ದುಪಡಿ ತಂದು ಇಡಬ್ಲ್ಯುಎಸ್ ಗೆ ಮೀಸಲಾತಿ ನೀಡಲಾಗಿತ್ತು. ಸಿಜೆಐ ಡಿವೈ ಚಂದ್ರಚೂಡ್, ನ್ಯಾ. ದಿನೇಶ್ ಮಹೇಶ್ವರಿ, ಎಸ್ ಆರ್ ಭಟ್, ಬೆಲಾ ಎಂ ತ್ರಿವೇದಿ ಹಾಗೂ ಜೆಬಿ ಪರ್ದಿವಾಲ ಅವರನ್ನೊಳಗೊಂಡ ಪೀಠ ಅರ್ಜಿಗಳನ್ನು ವಜಾಗೊಳಿಸಿದ್ದು, ಯಾವುದೇ ಲೋಪಗಳೂ ಇಲ್ಲ ಎಂದು ಹೇಳಿದೆ.

ನವೆಂಬರ್ 7, 2022 ರಂದು, ಸುಪ್ರೀಂ ಕೋರ್ಟ್ ನ 5  ನ್ಯಾಯಾಧೀಶರ ಪೀಠವು 3: 2 ಬಹುಮತದಿಂದ ಇಡಬ್ಲ್ಯುಎಸ್ ಗೆ ಸಂಬಂಧಿಸಿದ ತಿದ್ದುಪಡಿಯನ್ನು ಎತ್ತಿಹಿಡಿದಿತ್ತು. ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಬೇಲಾ ಎಂ ತ್ರಿವೇದಿ ಮತ್ತು ಜೆಬಿ ಪರ್ದಿವಾಲಾ ಅವರು ತೀರ್ಪಿನ ಸಿಂಧುತ್ವವನ್ನು ಎತ್ತಿ ಹಿಡಿದಿದ್ದರು. ನಿವೃತ್ತ ಸಿಜೆಐ ಯುಯು ಲಲಿತ್ ಮತ್ತು ನ್ಯಾಯಮೂರ್ತಿ ಎಸ್‌ಆರ್ ಭಟ್ ಅವರು 10% ಕೋಟಾವನ್ನು "ಅಸಂವಿಧಾನಿಕ" ಎಂದು ಘೋಷಿಸಿದ್ದರು.

SCROLL FOR NEXT