ದೇಶ

ಮೇ.26 ರಿಂದ ಗೋ ಫರ್ಸ್ಟ್ ಏರ್ಲೈನ್ಸ್ ನ ಎಲ್ಲಾ ವಿಮಾನಗಳೂ ರದ್ದು

Srinivas Rao BV

ನವದೆಹಲಿ: ಗೋ ಫರ್ಸ್ಟ್ ಏರ್ಲೈನ್ಸ್ ಮೇ.26 ರಿಂದ ತನ್ನಾ ಎಲ್ಲಾ ವಿಮಾನಗಳನ್ನೂ ರದ್ದುಗೊಳಿಸಿದೆ, ಕಾರ್ಯಾಚರಣೆಯ ಕಾರಣಗಳನ್ನು ನೀಡಿದೆ. 

ಇದಕ್ಕೂ ಮುನ್ನ ಮೇ.19 ವರೆಗೆ ಏರ್ಲೈನ್ಸ್ ನ ಎಲ್ಲಾ ವಿಮಾನಗಳ ಕಾರ್ಯಾಚರಣೆಯೂ ಸ್ಥಗಿತಗೊಂಡಿತ್ತು.

"ಕಾರ್ಯಾಚರಣೆಯ ಕಾರಣಗಳಿಂದಾಗಿ, 2023 ರ ಮೇ.26 ರವರೆಗೆ ನಿಗದಿಪಡಿಸಲಾದ ಗೋ ಫಸ್ಟ್ ಫ್ಲೈಟ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ. ವಿಮಾನ ರದ್ದತಿಯಿಂದ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ" ಎಂದು ಗೋ ಫಸ್ಟ್ ಹೇಳಿಕೆ ನೀಡಿದೆ. ಶೀಘ್ರದಲ್ಲೇ ಸಂಪೂರ್ಣ ಮರುಪಾವತಿಯನ್ನು ಮೂಲ ಪಾವತಿ ವಿಧಾನಕ್ಕೆ ನೀಡಲಾಗುವುದು ಎಂದು ಏರ್‌ಲೈನ್ ಹೇಳಿದೆ.

"ವಿಮಾನ ರದ್ದತಿ ನಿಮ್ಮ ಪ್ರಯಾಣದ ಯೋಜನೆಗಳನ್ನು ಅಡ್ಡಿಪಡಿಸಿರಬಹುದು ಎಂದು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ನಾವು ಮಾಡಬಹುದಾದ ಎಲ್ಲಾ ಸಹಾಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ" ಎಂದು ಏರ್ಲೈನ್ಸ್ ತಿಳಿಸಿದೆ.

ಕಂಪನಿ ಇತ್ತೀಚೆಗೆ ದಿವಾಳಿತನ ಮತ್ತು ಅದರ ಕಾರ್ಯಾಚರಣೆಗಳ ಪುನರುಜ್ಜೀವನದ ಅಡಿಯಲ್ಲಿ ತಕ್ಷಣದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದೆ. "ನಾವು ಶೀಘ್ರದಲ್ಲೇ ಬುಕಿಂಗ್ ಪುನರಾರಂಭಿಸುತ್ತೇವೆ. ನಿಮ್ಮ ತಾಳ್ಮೆಗಾಗಿ ಧನ್ಯವಾದಗಳು" ಎಂದು ಏರ್‌ಲೈನ್ ಹೇಳಿದೆ.

SCROLL FOR NEXT