ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಪ್ರದೇಶ: ನಾಲ್ವರು ಯುವಕರಿಂದ ಮಹಿಳೆ ಮೇಲೆ ಹಲವು ಬಾರಿ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ಬಾಗ್‌ಪತ್ ನಲ್ಲಿ 35 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಗ್ರಾಮದ ನಾಲ್ವರು ಯುವಕರು ಹಲವು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬಾಗ್‌ಪತ್: ಉತ್ತರ ಪ್ರದೇಶದ ಬಾಗ್‌ಪತ್ ನಲ್ಲಿ 35 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಗ್ರಾಮದ ನಾಲ್ವರು ಯುವಕರು ಹಲವು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಸರ್ಕಾರಿ ನೌಕರಿ ಬಯಸುತ್ತಿದ್ದ ಸಂತ್ರಸ್ತ ಮಹಿಳೆಗೆ ಆರೋಪಿಗಳು ಸಹಾಯ ಮಾಡುವ ಭರವಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 14 ರಂದು ಸರ್ಕಾರಿ ಉದ್ಯೋಗದ ಭರವಸೆ ನೀಡಿದ ಹತ್ತು ದಿನಗಳ ನಂತರ, ಆರೋಪಿಗಳಾದ ಸೌರಭ್, ಕಮಲ್, ಶುಭಂ ಮತ್ತು ಸಾಗರ್ ಎಂಬ ನಾಲ್ವರು ನನ್ನ ಮನೆಗೆ ಬಂದು ಮಾದಕ ದ್ರವ್ಯ ಬೆರೆಸಿದ ತಂಪು ಪಾನೀಯ ಕುಡಿಸಿ, ಅತ್ಯಾಚಾರ ಎಸಗಿದ್ದಾರೆ ಎಂದು ವಿಚ್ಛೇದಿತ ಮಹಿಳೆ ತನ್ನ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪ್ರಜ್ಞಾಹೀನಳಾಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಡೀ ಘಟನೆಯನ್ನು ಯುವಕರು ಚಿತ್ರೀಕರಿಸಿದ್ದಾರೆ. ನಂತರ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ವೀಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಕೆಯ ಪರಿಸ್ಥಿತಿಯನ್ನು ಬಳಸಿಕೊಂಡ ಯುವಕರು ಮಹಿಳೆ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಮತ್ತು ಮಹಿಳೆ ವಿರೋಧಿಸಿದಾಗಲೆಲ್ಲಾ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಎಲ್ಲರೂ 20 ರಿಂದ 26 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!