ಪ್ರಾತಿನಿಧಿಕ ಚಿತ್ರ 
ದೇಶ

ವಿವಾದದ ಬಳಿಕ ಮುಸ್ಲಿಂ ಯುವಕನೊಂದಿಗೆ ನಿಶ್ಚಯವಾಗಿದ್ದ ಮಗಳ ಮದುವೆ ರದ್ದು ಮಾಡಿದ ಬಿಜೆಪಿ ನಾಯಕ!

ಬಿಜೆಪಿ ನಾಯಕರೊಬ್ಬರ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿದ್ದಾಳೆ ಎಂಬ  ಲಗ್ನ ಪತ್ರಿಕೆ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ವಿವಾದಕ್ಕೆ ಕಾರಣವಾಯಿತು. ಬಳಿಕ, ಬಿಜೆಪಿ ನಾಯಕ ಯಶಪಾಲ್ ಬೇನಾಮ್ ಅವರು ಶನಿವಾರ ಉತ್ತರಾಖಂಡ್‌ನ ಪೌರಿ ಗರ್ವಾಲ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಂದಿಗಿನ ತಮ್ಮ ಮಗಳ ಮದುವೆಯನ್ನು ವರನ ಕುಟುಂಬದೊಂದಿಗೆ 'ಪರಸ್ಪರ ಒಪ್ಪಿಗೆ'ಯೊಂದಿಗ

ಪೌರಿ ಗರ್ವಾಲ್: ಬಿಜೆಪಿ ನಾಯಕರೊಬ್ಬರ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿದ್ದಾಳೆ ಎಂಬ  ಲಗ್ನ ಪತ್ರಿಕೆ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ವಿವಾದಕ್ಕೆ ಕಾರಣವಾಯಿತು. ಇದಾದ ಬಳಿಕ, ಬಿಜೆಪಿ ನಾಯಕ ಯಶಪಾಲ್ ಬೇನಾಮ್ ಅವರು ಶನಿವಾರ ಉತ್ತರಾಖಂಡ್‌ನ ಪೌರಿ ಗರ್ವಾಲ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಂದಿಗಿನ ತಮ್ಮ ಮಗಳ ಮದುವೆಯನ್ನು ವರನ ಕುಟುಂಬದೊಂದಿಗೆ 'ಪರಸ್ಪರ ಒಪ್ಪಿಗೆ'ಯೊಂದಿಗೆ ರದ್ದುಗೊಳಿಸಿದ್ದಾರೆ.

ಯಶಪಾಲ್ ಬೇನಾಮ್

ಬಿಜೆಪಿ ಮುಖಂಡರ ಮಗಳ ಮದುವೆ ಮೇ 28ರಂದು ನಡೆಯಬೇಕಿತ್ತು. ಈಗ ಮೇ 28 ರಂದು ನಡೆಯಲಿರುವ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ನಾಯಕ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಸಾರ್ವಜನಿಕ ಪ್ರತಿನಿಧಿಯಾದ ನನಗೆ ನನ್ನ ಮಗಳ ಮದುವೆ ಪೊಲೀಸ್ ಮತ್ತು ಆಡಳಿತದ ರಕ್ಷಣೆಯಲ್ಲಿ ನಡೆಯುವುದು ಇಷ್ಟವಿರಲಿಲ್ಲ. ನಾನು ಸಾರ್ವಜನಿಕ ಭಾವನೆಗಳನ್ನು ಗೌರವಿಸುತ್ತೇನೆ. ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆಗೆ ನಿರ್ಧರಿಸಲಾಯಿತು. ಆದರೆ, ಕೆಲವು ವಿಷಯಗಳು ಮುನ್ನೆಲೆಗೆ ಬಂದ ನಂತರ ವಿವಾಹವನ್ನು ರದ್ದುಗೊಳಿಸಲಾಯಿತು ಎಂದು ಬೇನಾಮ್ ಹೇಳಿದರು.

'ನನ್ನ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗಲು ಹೊರಟಿದ್ದಳು. ಮಕ್ಕಳ ಸಂತೋಷ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಎರಡೂ ಕುಟುಂಬಗಳು ಅವರಿಗೆ ಮದುವೆ ಮಾಡಲು ನಿರ್ಧರಿಸಿದ್ದವು. ಅದಕ್ಕಾಗಿ ಕಾರ್ಡ್‌ಗಳನ್ನು ಸಹ ಮುದ್ರಿಸಿ ಹಂಚಲಾಗಿತ್ತು. ಆದರೆ, ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿ, ಹಲವು ರೀತಿಯ ವಿಷಯಗಳು ಮುನ್ನೆಲೆಗೆ ಬಂದಿವೆ' ಎಂದು ಹೇಳಿದರು.

ವಿವಾದ ಭುಗಿಲೆದ್ದ ನಂತರ, ಪರಸ್ಪರ ಒಪ್ಪಿಗೆಯೊಂದಿಗೆ, ಎರಡೂ ಕುಟುಂಬಗಳು ಸದ್ಯಕ್ಕೆ ಮದುವೆಯ ವಿಧಿವಿಧಾನಗಳನ್ನು ನಡೆಸದಿರಲು ನಿರ್ಧರಿಸಿದ್ದೇವೆ. ಆದರೆ, ಅದೇ ಯುವಕನೊಂದಿಗೆ ಮಗಳ ವಿವಾಹದ ಬಗ್ಗೆ ಕುಟುಂಬದವರು, ಹಿತೈಷಿಗಳು ಮತ್ತು ವರನ ಕಡೆಯವರು ಮಾತುಕತೆ ನಡೆಸಿ ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT