ಇಡಿ ಕಚೇರಿ ಮುಂದೆ ಪ್ರತಿಭಟನೆ 
ದೇಶ

ಮಹಾರಾಷ್ಟ್ರ: ಪ್ರತಿಭಟನೆ ನಡುವೆ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಇಡಿ ಮುಂದೆ ಹಾಜರು

ಈಗ ದಿವಾಳಿಯಾಗಿರುವ ಹಣಕಾಸು ಸೇವಾ ಸಂಸ್ಥೆ ಐಎಲ್ ಆ್ಯಂಡ್ ಎಫ್‌ಎಸ್ ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಸೋಮವಾರ  ಜಾರಿ ನಿರ್ದೇಶನಾಲಯ (ಇಡಿ) ಎದುರು ಹಾಜರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ: ಈಗ ದಿವಾಳಿಯಾಗಿರುವ ಹಣಕಾಸು ಸೇವಾ ಸಂಸ್ಥೆ ಐಎಲ್ ಆ್ಯಂಡ್ ಎಫ್‌ಎಸ್ ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಸೋಮವಾರ  ಜಾರಿ ನಿರ್ದೇಶನಾಲಯ (ಇಡಿ) ಎದುರು ಹಾಜರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್ ಸಿಪಿ ಹಿರಿಯ ನಾಯಕರಾಗಿರುವ ಪಾಟೀಲ್ ಇಂದು ಬೆಳಗ್ಗೆ 11-50ರ ಸುಮಾರಿನಲ್ಲಿ ಹೆಚ್ಚಿನ ಸಂಖ್ಯೆಯ ತಮ್ಮ ಪಕ್ಷದ ಬೆಂಬಲಿಗರ ಸಮ್ಮುಖದಲ್ಲಿ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ  ಇಡಿ ಕಚೇರಿ ತಲುಪಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪಾಟೀಲ್ ಅವರಿಂದ ಹೇಳಿಕೆ ಪಡೆದಿರುವ ಸಾಧ್ಯತೆಯಿದೆಯ 

ಈ ಮಧ್ಯೆ  ಪಾಟೀಲ್‌ಗೆ ಸಮನ್ಸ್ ಜಾರಿ ಮಾಡಿರುವುದನ್ನು ವಿರೋಧಿಸಿ ನೂರಾರು ಎನ್‌ಸಿಪಿ ಕಾರ್ಯಕರ್ತರು ಇಡಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಕೇಂದ್ರ ಮತ್ತು ಇಡಿ 'ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ' ಎಂದು ಪ್ರತಿಭಟನಾಕಾರರು ಆರೋಪಿಸಿದರು. ಗಾಂಧಿ ಟೋಪಿ ಧರಿಸಿ ಮತ್ತು ಬ್ಯಾನರ್‌ ಹಿಡಿದುಕೊಂಡು ಪ್ರತಿಭಟನೆ ನಡೆಸಲಾಯಿತು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಬೃಹತ್ ಗಾತ್ರದ ಕಟೌಟುಗಳನ್ನು ಕೂಡಾ ಪ್ರತಿಭಟನಾಕಾರರು ಪ್ರದರ್ಶಿಸುವ ಮೂಲಕ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ನಾನು ಪ್ರತಿಪಕ್ಷದ ಭಾಗವಾಗಿದ್ದು, ಅಂತಹ ನೋವನ್ನು ಎದುರಿಸಬೇಕಾಗಿದೆ. ಈ ಹಿಂದೆ ಐಎಲ್ ಎಫ್‌ಎಸ್ ಹೆಸರನ್ನು ಕೇಳಿರಲಿಲ್ಲ, ಆದರೆ ಇಡಿ ಅಧಿಕಾರಿಗಳು ಸಮನ್ಸ್ ಮಾಡಿದ್ದಾರೆ. ಅವರ ಮುಂದೆ ಹಾಜರಾಗಿ, ಕಾನೂನು ಚೌಕಟ್ಟಿನಲ್ಲಿ ಉತ್ತರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. "ಶಾಂತಿ ಕಾಪಾಡಲು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ ಪಾಟೀಲ್, ಇದರಿಂದ ಭಯ ಪಡದಂತೆ ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT