ದೇಶ

ಅಧ್ಯಾಪಕರ ನೇಮಕಾತಿ, ಪಿಎಚ್‌ಡಿ ಪ್ರದಾನ ವೇಳೆ ನಿಯಮ ಉಲ್ಲಂಘನೆ ಪರಿಶೀಲಿಸಲು ಸಮಿತಿ ರಚನೆ

Lingaraj Badiger

ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ(ಎಚ್‌ಇಐ) ಅಧ್ಯಾಪಕರ ನೇಮಕಾತಿ ಮತ್ತು ಪಿಎಚ್‌ಡಿ ಪದವಿಗೆ ಸಂಬಂಧಿಸಿದ ನಿಯಮಾವಳಿಗಳ ಉಲ್ಲಂಘನೆಯನ್ನು ಪರಿಶೀಲಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಶೀಘ್ರದಲ್ಲೇ ಸಮಿತಿಯನ್ನು ರಚಿಸಲಿದೆ.

ಸಮಿತಿಯು ನಿಯಮಿತವಾಗಿ ಸಭೆ ಸೇರುತ್ತದೆ ಮತ್ತು ಕೆಲವು ಸಂಸ್ಥೆಗಳನ್ನು ಆಯ್ಕೆ ಮಾಡಿ, ಅಧ್ಯಾಪಕರ ನೇಮಕಾತಿ ಮತ್ತು ಪಿಎಚ್‌ಡಿ ಪದವಿಗಳನ್ನು ನೀಡುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಈ ಪ್ರಕ್ರಿಯೆಯ ಮೂಲಕ ಯುಜಿಸಿ ನಿಯಮಾವಳಿಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತದೆ.

ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮಗಳನ್ನು ಸಹ ಈ ಸಮತಿ ಶಿಫಾರಸು ಮಾಡುತ್ತದೆ.

"ಯುಜಿಸಿ ಅಂತಹ ನಿಯಮ ಉಲ್ಲಂಘನೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಯುಜಿಸಿ ನಿಯಮಗಳ ಉಲ್ಲಂಘನೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಉದ್ದೇಶಿಸಿದೆ" ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೇಶ್ ಕುಮಾರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಯುಜಿಸಿ ಏಪ್ರಿಲ್ 24 ರಂದು ನಡೆದ ತನ್ನ 568ನೇ ಸಭೆಯಲ್ಲಿ ಸಮಿತಿಯನ್ನು ರಚಿಸಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT