ತೆಲಂಗಾಣ: ತೆಲಂಗಾಣ ವಿಧಾನಸಭೆ ಚುನಾವಣೆಗೆ ಜುಬ್ಲಿ ಹಿಲ್ಸ್ ಕ್ಷೇತ್ರಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಹೀಗಾಗಿ ಜುಬ್ಲಿ ಹಿಲ್ಸ್ ವಿಧಾನಸಭಾ ಕ್ಷೇತ್ರವು ಹೈ-ಪ್ರೊಫೈಲ್ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಹಾಲಿ ಬಿಆರ್‌ಎಸ್ ಶಾಸಕ ಮಾಗಂಟಿ ಗೋಪಿನಾಥ್ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ಲಂಕಾಳ ದೀಪಕ್ ರೆಡ್ಡಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಎಐಎಂಐಎಂ ಇತ್ತೀಚೆಗೆ ತಾನು ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ತಿಳಿಸಿದೆ, ಆದರೆ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಜುಬಿಲಿ ಹಿಲ್ಸ್ ಕ್ಷೇತ್ರವು ಐಷಾರಾಮಿ ಪ್ರದೇಶದ ಟ್ಯಾಗ್ ಹೊಂದಿದ್ದರೂ, ಕಲ್ಪನೆಗೂ ಮತ್ತು ವಾಸ್ತವತೆಯ ನಡುವೆ ಸಂಪೂರ್ಣ ವ್ಯತ್ಯಾಸವಿದೆ, ಏಕೆಂದರೆ ಈ ವಿಭಾಗ ಶೇ.70 ರಷ್ಚು ಕೊಳೆಗೇರಿಗಳಿಂದ ಕೂಡಿದೆ. ಯೂಸುಫಗುಡ, ಎರ್ರಗಡ್ಡಾ ಮತ್ತು ಶೇಕಪೇಟೆ, ಬೋರಬಂಡಾದಾದ್ಯಂತ ಹರಡಿರುವ ಕಡಿಮೆ ಆದಾಯದ ಕಾಲೋನಿಗಳಿಂದ ಕೂಡಿದೆ.
ಮತದಾರರ ಪ್ರಕಾರ ಕ್ಷೇತ್ರವು ವಿವಿಧ ನಾಗರಿಕ ಸಮಸ್ಯೆಗಳಿಂದ ಮುಳುಗಿದೆ ಮತ್ತು ಒಳಚರಂಡಿ ಸಮಸ್ಯೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒಳಚರಂಡಿ ಒಂದು ಪ್ರಮುಖ ಸಮಸ್ಯೆಯಾಗಿದೆ. ಪ್ರತಿ 10-15 ದಿನಗಳಿಗೊಮ್ಮೆ, ಚರಂಡಿ ನೀರು ರಸ್ತೆಗಳಲ್ಲಿ ಉಕ್ಕಿ ಹರಿಯುತ್ತವೆ, ಇದು ದೊಡ್ಡ ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ಶ್ರೀನಗರ ಕಾಲೋನಿಯ ನಿವಾಸಿ ಮಹೇಶ್ವರರಾವ್ ಜಿವಿ ಹೇಳಿದ್ದಾರೆ.
ಯುವ ಮತದಾರರಾದ ಅನುರಾಗ್ ರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಆದಾಗ್ಯೂ, ನಗರದ ಬೆಳವಣಿಗೆಯ ವೇಗವನ್ನು ಪರಿಗಣಿಸಿ ಇದು ಅನಿವಾರ್ಯ ಎಂದು ಅವರು ಹೇಳಿದ್ದಾರೆ. ನಾವು ವಿದ್ಯುತ್ ಮತ್ತು ನೀರಿನ ಪೂರೈಕೆಯಿಂದ ತೃಪ್ತರಾಗಿದ್ದೇವೆ ಎಂದು ಅವರು ಹೇಳುತ್ತಾರೆ.
ಆದರೆ ಈ ಸಂತೃಪ್ತಿ ಕ್ಷೇತ್ರದಾದ್ಯಂತ ಪ್ರತಿಧ್ವನಿಸಲಿಲ್ಲ. ಶ್ರೀ ನಗರ ಕಾಲೋನಿಯ ನಿವಾಸಿಗಳು ಈ ಪ್ರದೇಶದಲ್ಲಿ ನೀರು ಸರಬರಾಜು ಅನಿಯಮಿತವಾಗಿದೆ ಮತ್ತು ಅವರು ಆಗಾಗ್ಗೆ ನೀರನ್ನು ಖರೀದಿಸಬೇಕಾಗಿದೆ ಎಂದು ಹೇಳುತ್ತಾರೆ. "ನೀರಿನ ಬಿಲ್ ಮತ್ತೊಂದು ಗಮನಿಸಬೇಕಾದ ಅಂಶವಾಗಿದೆ ಎಂದು ದೇವ್ ಹೇಳುತ್ತಾರೆ.
ಕಳೆದ 10 ವರ್ಷಗಳಲ್ಲಿ ಕ್ಷೇತ್ರದಲ್ಲಿ ಬಡವರಿಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಬಡವರ ಜೀವನ ಪರಿಸ್ಥಿತಿ ನೋಡಿ ನಾನು ದಿಗ್ಭ್ರಮೆಗೊಂಡಿದ್ದೇನೆ ಎಂದು ಮೊಹಮದ್ ಅಜರುದ್ದೀನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆ ಸ್ ಗೆ ತಿಳಿಸಿದ್ದಾರೆ. ಕ್ಷೇತ್ರದಲ್ಲಿ ರೌಡಿಸಂ ಹೆಚ್ಚಾಗಿದ್ದು ಇಲ್ಲಿನ ನಿವಾಸಿಗಳು ಭಯದಿಂದ ಬದುಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಡ್ರೈನೇಜ್ ನೀರು ಮತ್ತು ಹೈಟೆನ್ಷನ್ ತಂತಿಗಳ ಸಮಸ್ಯೆ ತಮ್ಮ ಪ್ರಚಾರದ ಕೇಂದ್ರಬಿಂದುವಾಗಿರುತ್ತದೆ ಎಂದು ಅವರು ಹೇಳಿದರು. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಗಮನಾರ್ಹ ಪ್ರಭಾವ ಬೀರಿದ್ದಾರೆ.
ಅಲ್ಪಸಂಖ್ಯಾತರ ಸ್ಥಾನಮಾನ ಕುರಿತು ಮಾತನಾಡಿದ ಅವರು, ಮೀಸಲಾತಿಯ ಭರವಸೆಗಳನ್ನು ಈಡೇರಿಸಿದ ಏಕೈಕ ಪಕ್ಷ ಕಾಂಗ್ರೆಸ್. “ವಕ್ಫ್ ಭೂಮಿಯನ್ನು ಎಲ್ಲಾ ಅಭಿವೃದ್ಧಿಗೆ ಬಳಸಲಾಗುತ್ತದೆ. ಒಂದು ಕಾಲದಲ್ಲಿ ವಕ್ಫ್ ಭೂಮಿ 77,000 ಎಕರೆ ಇತ್ತು. ಈಗ 22 ಸಾವಿರ ಎಕರೆಗೆ ಇಳಿದಿದೆ' ಎಂದು ಆರೋಪಿಸಿದರು. ಇಮಾಮ್‌ಗಳಿಗೆ ವೇತನ ಪಾವತಿಯಲ್ಲಿ ವಿಳಂಬವಾಗಿದೆ ಎಂದು ಅವರು ಆರೋಪಿಸಿದರು.