ದೇಶ

ಜನರ ಆರೋಗ್ಯದ ಕಗ್ಗೊಲೆ: ದೆಹಲಿ ವಾಯು ಗುಣಮಟ್ಟದ ಕುರಿತು ಸುಪ್ರೀಂ ಕೋರ್ಟ್

Srinivas Rao BV

ನವದೆಹಲಿ: ದೆಹಲಿಯಲ್ಲಿನ ವಾಯು ಮಾಲಿನ್ಯ ರಾಜಕೀಯ ಸಂಘರ್ಷದ ವಸ್ತುವಾಗಿರಲು ಸಾಧ್ಯವಿಲ್ಲ, ಕುಸಿಯುತ್ತಿರುವ ವಾಯು ಗುಣಮಟ್ಟ ಜನರ ಆರೋಗ್ಯದ ಕೊಲೆಗೆ ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಪಂಜಾಬ್ ಸರ್ಕಾರಕ್ಕೆ ಕೃಷಿ ತ್ಯಾಜ್ಯವನ್ನು ಸುಡುವುದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಎಲ್ಲಾ ಸಂದರ್ಭಗಳಲ್ಲಿಯೂ ರಾಜಕೀಯ ಸಂಘರ್ಷವಿರುವುದು ಸಾಧ್ಯವಿಲ್ಲ ಎಂದು ಹೇಳಿದೆ.

ಕೃಷಿ ತ್ಯಾಜ್ಯ ಸುಡುವುದು ನಿಲ್ಲಬೇಕು. ನೀವು ಅದನ್ನು ಹೇಗೆ ಮಾಡುತ್ತೀರಿ ಅದು ನಮಗೆ ಗೊತ್ತಿಲ್ಲ. ನಿಲ್ಲಿಸುವುದು ನಿಮ್ಮ ಕೆಲಸ. ಅದು ನಿಲ್ಲಬೇಕು. ತಕ್ಷಣವೇ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಕ್ಕೆ ಹೇಳಿದೆ.

"ನೀವು ಒಂದು ಕಡೆ ರಾಗಿಯನ್ನು ಉತ್ತೇಜಿಸುತ್ತಿದ್ದೀರಿ ಮತ್ತು ನಂತರ ಭತ್ತವನ್ನು ಅಂತರ್ಜಲವನ್ನು ಹಾಳುಮಾಡಲು ಬಿಡುತ್ತಿದ್ದೀರಿ" ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.

ಈ ರೀತಿಯ ಭತ್ತವನ್ನು ಈ ಅವಧಿಯಲ್ಲಿ ಬೆಳೆಯಬೇಕೇ ಎಂದು ಗಂಭೀರವಾದ ಅವಲೋಕನ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. "15 ವರ್ಷಗಳ ಹಿಂದೆ ಈ ಪ್ರಮಾಣದ ಬೆಳೆ ಬೆಳೆಯದ ಕಾರಣ ಈ ಸಮಸ್ಯೆ ಉದ್ಭವಿಸಲಿಲ್ಲ" ಈ ರಿತಿ ಬೆಳೆ ಬೆಳೆಯುವುದು, ಪಂಜಾಬ್‌ನ ನೀರಿನ ಮಟ್ಟವನ್ನು ನಾಶಪಡಿಸಿದೆ ಮತ್ತು ದೆಹಲಿಯ ಸುತ್ತಮುತ್ತಲಿನ ಹವಾಮಾನವು ಅದರ ಮೇಲೆ ಪರಿಣಾಮ ಬೀರುತ್ತದೆ  ಎಂದು ಸುಪ್ರೀಂ ಕೋರ್ಟ್ ಹೇಳಿದೆ.

SCROLL FOR NEXT