ತೆಲಂಗಾಣ ಸಿಎಂ ಕೆಸಿಆರ್ 
ದೇಶ

ತೆಲಂಗಾಣ ಚುನಾವಣೆ: ಸಿಎಂ ಕೆಸಿಆರ್ ಬಳಿ ಸ್ವಂತ ಕಾರಿಲ್ಲ! ಆಸ್ತಿ ಮೌಲ್ಯ ಎಷ್ಟು ಗೊತ್ತೇ?

ತೆಲಂಗಾಣ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಚಂದ್ರಶೇಖರ್ ರಾವ್ ತಮ್ಮ ಬಳಿ ಇರುವ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದಾರೆ.

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಚಂದ್ರಶೇಖರ್ ರಾವ್ ತಮ್ಮ ಬಳಿ ಇರುವ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದಾರೆ.

ತಮ್ಮ ಬಳಿ 58.92 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಚಂದ್ರಶೇಖರ್ ರಾವ್ ಘೋಷಿಸಿಕೊಂಡಿದ್ದಾರೆ. ಸಿಎಂ ಆಗಿರುವ ಕೆಸಿಆರ್ ಸ್ವಂತದ ಕಾರು, ಕೃಷಿ ಭೂಮಿಯನ್ನು ಹೊಂದಿಲ್ಲ.  ಆದರೆ ಪ್ರಮಾಣಪತ್ರದಲ್ಲಿ ತಾವು ಕೃಷಿಕರು ಎಂದು ನಮೂದಿಸಿರುವುದು ವಿಚಿತ್ರವಾಗಿದೆ. 

ಗುರುವಾರ (ನವೆಂಬರ್ 9) ಬಿಆರ್‌ಎಸ್ ನಾಯಕ ಕೆಸಿಆರ್  ಗಜ್ವೆಲ್ ಮತ್ತು ಕಮ್ಮಾರೆಡ್ಡಿ ಎರಡೂ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು.
 
2018 ರ ಚುನಾವಣೆಯಲ್ಲಿ ಕೆಸಿಆರ್ ಬಳಿ 22 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇತ್ತು. ಈ ಹಿಂದೆಯೂ ತಮ್ಮ ಬಳಿ ಸ್ವಂತ ಕಾರು ಇಲ್ಲವೆಂದು ಘೋಷಿಸಿದ್ದರು. ಆದರೆ 2015 ರಲ್ಲಿ ಸಿಎಂ ಬೆಂಗಾವಲು ಪಡೆಯಲ್ಲಿ ನಾಲ್ಕು ಟೊಯಾಟಾ ಲ್ಯಾಂಡ್ ಕ್ರೂಸರ್ ಕಾರು ಇತ್ತು.

ತಮ್ಮದು ಹಿಂದೂ ಅವಿಭಜಿತ ಕುಟುಂಬ ಎಂದು ಘೋಷಿಸಿರುವ ಕೆಸಿಆರ್, ತಮ್ಮ ಒಟ್ಟು ಕುಟುಂಬದ ಆಸ್ತಿ 59 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ತಮಗೆ 25 ಕೋಟಿ ರೂಪಾಯಿ ಸಾಲ ಇರುವುದಾಗಿ ತಿಳಿಸಿದ್ದಾರೆ. 

ಪ್ರಮಾಣಪತ್ರದ ಪ್ರಕಾರ, ಕೆಸಿಆರ್ ಪತ್ನಿ ಶೋಭಾ ಬಳಿ ಒಟ್ಟು 7 ಕೋಟಿ ರೂಪಾಯಿ ಚರಾಸ್ತಿ ಇದ್ದು, ಹಿಂದೂ ಅವಿಭಕ್ತ ಕುಟುಂಬದಲ್ಲಿ 9 ಕೋಟಿ ರೂಪಾಯಿಗಳಷ್ಟು ಚರಾಸ್ತಿ ಇದೆ. ಅಷ್ಟೆ ಅಲ್ಲದೇ 2.81 ಕೆ.ಜಿ ಚಿನ್ನಾಭರಣ, ವಜ್ರ ಹಾಗೂ ಇತರ ಬೆಲೆ ಬಾಳುವ ಸುಮಾರು 1.5 ಕೋಟಿ ರೂಪಾಯಿ ವಸ್ತುಗಳಿವೆ. ಇಂದಿನ ಮಾರುಕಟ್ಟೆಯ ಬೆಲೆಯಲ್ಲಿ ಕೆಸಿಆರ್ ಅವರ ಸ್ಥಿರಾಸ್ತಿಯ ಒಟ್ಟು ಮೌಲ್ಯ 8.50 ಕೋಟಿ ರೂಪಾಯಿಗಳಿಷ್ಟು ಹಿಂದೂ ಅವಿಭಜಿತ ಕುಟುಂಬದ ಹೆಸರಿನಲ್ಲಿ 15 ಕೋಟಿ ರೂಪಾಯಿಗಳಿವೆ.

ಕೆಸಿಆರ್ ಪುತ್ರ, ಬಿಆರ್ ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಹಾಗೂ ಅವರ ಕುಟುಂಬದ ಬಳಿ ಒಟ್ಟು 54.27 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಬಿಎ ಪದವೀಧರರಾಗಿರುವ ಕೆಸಿಆರ್ ವಿರುದ್ಧ 9 ಕ್ರಿಮಿನಲ್ ಕೇಸ್ ಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel