ದೇಶ

ಕೇರಳ: ಅಲುವಾ ಅತ್ಯಾಚಾರ, ಕೊಲೆ ಪ್ರಕರಣ- ಅಪರಾಧಿಗೆ ಮರಣದಂಡನೆ

Nagaraja AB

ಅಲುವಾ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ವ್ಯಕ್ತಿಗೆ ಕೇರಳ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿದೆ.

ಬಿಹಾರದ 5 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ವಲಸೆ ಕಾರ್ಮಿಕ ಅಶ್ವಕ್ ಆಲಂಗೆ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಸೋಮನ್ ಅವರ ಉಗ್ರ ಶಿಕ್ಷೆಯನ್ನು ಪ್ರಕಟಿಸಿದರು.ದೇಶಾದ್ಯಂತ ಮಕ್ಕಳ ದಿನಾಚರಣೆ  ದಿನದಂದೇ ಈ  ಶಿಕ್ಷೆಯನ್ನು ಪ್ರಕಟಿಸಲಾಯಿತು.

ಆಲಂಗೆ ಶಿಕ್ಷೆ ವಿಧಿಸಿದಾಗ ಸಂತ್ರಸ್ತೆಯ ಪೋಷಕರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣ ಅಪರೂಪದ-ಅಪರೂಪದ ವರ್ಗಕ್ಕೆ ಸೇರುತ್ತದೆ ಮತ್ತು ಆದ್ದರಿಂದ ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಶಿಕ್ಷೆ ಕುರಿತ ವಾದದ ಸಮಯದಲ್ಲಿ, ಇತರ ಆರೋಪಿಗಳನ್ನು ಬಿಡಲಾಗಿದ್ದು, ನನನ್ನು ಮಾತ್ರ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆಲಂ ನ್ಯಾಯಾಲಯದಲ್ಲಿ ಹೇಳಿದ್ದರು ಮತ್ತು ಅದನ್ನು ಮೀರಿ ಅವರು ಯಾವುದೇ ಸಲ್ಲಿಕೆಯನ್ನು ಮಾಡಲಿಲ್ಲ ಎಂದು ಪ್ರಾಸಿಕ್ಯೂಷನ್ ಹೇಳಿದೆ.

ಚಾರ್ಜ್ ಶೀಟ್‌ನಲ್ಲಿ ಎಲ್ಲಾ 16 ಅಪರಾಧಗಳಲ್ಲಿ ಆಲಂ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿತ್ತು. 16ರಲ್ಲಿ ಐದು ಅಪರಾಧಗಳಿಗೆ ಮರಣದಂಡನೆ ಶಿಕ್ಷೆಯಾಗುತ್ತದೆ ಎಂದು ಪ್ರಾಸಿಕ್ಯೂಷನ್ ಈ ಹಿಂದೆ ಹೇಳಿತ್ತು.

ಜುಲೈ 28 ರಂದು ಅಪ್ರಾಪ್ತ ಬಾಲಕಿಯನ್ನು ಬಾಡಿಗೆ ಮನೆಯಿಂದ ಅಪಹರಿಸಿದ ನಂತರ ಆಕೆಯ ಮೇಲೆ ಅಮಾನುಷ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಹತ್ಯೆ ಮಾಡಲಾಗಿತ್ತು. ಬಳಿಕ ಆಲುವಾದಲ್ಲಿನ ಸ್ಥಳೀಯ ಮಾರುಕಟ್ಟೆಯ ಹಿಂಭಾಗದ ಪ್ರದೇಶದಲ್ಲಿ ಬಾಲಕಿಯ ಶವವನ್ನು ಬಣವೆಯಲ್ಲಿ ಎಸೆದಿರುವುದು ಪತ್ತೆಯಾಗಿತ್ತು.  ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.

SCROLL FOR NEXT