T20 ವಿಶ್ವಕಪ್ 2026: ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್ ಭರ್ಜರಿ ಗೆಲುವು!
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಟೂರ್ನಿಯ ಡಿ ಗ್ರೂಪ್ ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ನಾಯಕ ಏಡೆನ್ ಮಾರ್ಕ್ರಾಮ್ ಅವರ ಆಕರ್ಷಕ ಬ್ಯಾಟಿಂಗ್ ಮತ್ತು ಮಾರ್ಕೊ ಜಾನ್ಸೆನ್ ಅವರ ಮಾರಕ ಬೌಲಿಂಗ್ (4/40) ನೆರವಿನಿಂದ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ತಂಡವನ್ನು 175 ರನ್ ಗಳಿಗೆ ನಿಯಂತ್ರಿಸಿ, ಸುಲಭವಾಗಿ ಜಯಗಳಿಸಿತು
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಆರಂಭಿಕ ಆಟಗಾರರಾದ ಟಿಮ್ ಸೀಫರ್ಟ್13, ಫಿನ್ ಅಲೆನ್ 31, ರಚಿನ್ ರವೀಂದ್ರ 13, ಗ್ಲೆನ್ ಫಿಲ್ಲಿಪ್ಸ್ 1, ಮಾರ್ಕ್ ಚಾಪ್ ಮಾನ್ 48 ರನ್ ಗಳಿಸಿದರು. ಉಳಿದಂತೆ ಡಿ ಮಿಚ್ಚೆಲ್ 32, ಜೇಮ್ಸ್ ನೀಶಾಮ್ 23, ಮ್ಯಾಟ್ ಹೆನ್ರಿ 9 ರನ್ ಗಳಿಸಿದರು.
ನ್ಯೂಜಿಲೆಂಡ್ ನೀಡಿದ 176 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ಪರ ನಾಯಕ ಏಡೆನ್ ಮಾರ್ಕ್ರಾಮ್ 44 ಎಸೆತಗಳಲ್ಲಿ 4 ಸಿಕ್ಸರ್, 85 ಬೌಂಡರಿಗಳೊಂದಿಗೆ ಅಜೇಯ 86 ರನ್ ಗಳಿಸಿದರು. ಉಳಿದಂತೆ ಡಿಕಾಕ್ 20, ರಿಕೆಲ್ಟನ್ 21, ಡೆವಿಡ್ ಮಿಲ್ಲರ್ 24 ರನ್ ಗಳಿಸಿದರು.
ಇದರಿಂದಾಗಿ ದಕ್ಷಿಣ ಆಫ್ರಿಕಾ ಇನ್ನೂ 17 ಎಸೆತ ಬಾಕಿಯಿರುವಂತೆ 17.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಗೆಲುವಿನ ನಗೆ ಬೀರಿತು.

