ಪ್ರಾತಿನಿಧಿಕ ಚಿತ್ರ 
ದೇಶ

ಪುರುಷತ್ವಕ್ಕೆ ಸಿದ್ಧ ಚಿಕಿತ್ಸೆ ಪಡೆದ ಯುವಕ ಸಾವು; ಮೃತದೇಹವನ್ನು ಕತ್ತರಿಸಿ ಹಿತ್ತಲಿನಲ್ಲಿ ಹೂಳಿದ್ದ ವ್ಯಕ್ತಿ ಬಂಧನ!

ಮನೆಯ ಹಿತ್ತಲಿನಲ್ಲಿ ವ್ಯಕ್ತಿಯ ಶವವನ್ನು ಹೊರತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಳಪುರಂ ಪೊಲೀಸರು ಭಾನುವಾರ ಸಿದ್ಧ ಅಭ್ಯಾಸ ಮಾಡುತ್ತಿದ್ದ ವೈದ್ಯನನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ, ವೃತ್ತಿಯಲ್ಲಿ ಕಾರು ಚಾಲಕರಾಗಿದ್ದ ಕುಂಭಕೋಣಂ ಸಮೀಪದ ಮನಲ್ಮೇಡುವಿನ ಪಿ ಅಶೋಕ್ ರಾಜನ್ (27) ಎಂಬುವವರು ದೀಪಾವಳಿ ಹಬ್ಬದ ನಂತರ ನಾಪತ್ತೆಯಾಗಿದ್ದರು.

ತಂಜಾವೂರು: ಮನೆಯ ಹಿತ್ತಲಿನಲ್ಲಿ ವ್ಯಕ್ತಿಯ ಶವವನ್ನು ಹೊರತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಳಪುರಂ ಪೊಲೀಸರು ಭಾನುವಾರ ಸಿದ್ಧ ಅಭ್ಯಾಸ ಮಾಡುತ್ತಿದ್ದ ವೈದ್ಯನನ್ನು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ, ವೃತ್ತಿಯಲ್ಲಿ ಕಾರು ಚಾಲಕರಾಗಿದ್ದ ಕುಂಭಕೋಣಂ ಸಮೀಪದ ಮನಲ್ಮೇಡುವಿನ ಪಿ ಅಶೋಕ್ ರಾಜನ್ (27) ಎಂಬುವವರು ದೀಪಾವಳಿ ಹಬ್ಬದ ನಂತರ ನಾಪತ್ತೆಯಾಗಿದ್ದರು. ಆತನ ಅಜ್ಜಿ ಪದ್ಮಿನಿ ನವೆಂಬರ್ 14 ರಂದು ಚೋಳಪುರಂ ಪೊಲೀಸರಿಗೆ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು.

ಪೊಲೀಸರು ಚೋಳಪುರಂನ ಹತ್ತಿರದ ಪಟ್ಟಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಶೋಕ್ ತನ್ನ ಬೈಕನ್ನು ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು ಈಸ್ಟ್ ಸ್ಟ್ರೀಟ್‌ಗೆ ಹೋಗುತ್ತಿರುವುದು ಕಂಡುಬಂದಿದೆ. ವಿಚಾರಣೆ ನಡೆಸಿದಾಗ, ಆತನಿಗೆ ಸಿದ್ಧ ವೈದ್ಯ ಅಭ್ಯಾಸ ಮಾಡುತ್ತಿದ್ದ ಟಿ ಕೇಶವಮೂರ್ತಿ ಎಂಬಾತನ ಪರಿಚಯವಿತ್ತು ಎಂಬುದು ತಿಳಿದುಬಂದಿದೆ.

ಪೊಲೀಸರು ಕೇಶವಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಶೋಕ್‌ಗೆ ಪುರುಷತ್ವಕ್ಕಾಗಿ ಔಷಧಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಇದಾದ ಬಳಿಕ ಅಶೋಕ್ ಮೃತಪಟ್ಟಿದ್ದರು. ನಂತರ ಕೇಶವಮೂರ್ತಿ ಶವವನ್ನು ತುಂಡುತುಂಡಾಗಿ ಕತ್ತರಿಸಿ, ತನ್ನ ಮನೆಯ ಹಿತ್ತಲಿನಲ್ಲಿ ಹೂಳಿದ್ದರು ಎಂದು ಮೂಲಗಳು ತಿಳಿಸಿವೆ. 

ಭಾನುವಾರ ಅಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರು ಅಶೋಕ್ ಶವವನ್ನು ಹೊರತೆಗೆದರು. ಕೇಶವಮೂರ್ತಿ ನೀಡಿದ್ದ ಔಷಧಗಳು ಯಾವುದೇ ಪ್ರಭಾವ ಬೀರಿಲ್ಲ ಎಂದಿದ್ದಕ್ಕಾಗಿ ಅಶೋಕನನ್ನು ಕೊಲೆ ಮಾಡಿದ್ದಾನೆಯೇ ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT