ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಗಳು ಇಂದು ಗುರುವಾರ ಮುಂಜಾನೆ ಅಂತಿಮ ಹಂತಕ್ಕೆ ತಲುಪಿದ್ದು, ಕೊನೆಯ ಪೈಪ್ ನ್ನು ಪ್ರವೇಶಿಸಿ ಸಿಕ್ಕಿಬಿದ್ದ ಕಾರ್ಮಿಕರನ್ನು ಅವಶೇಷಗಳ ಮೂಲಕ ತಳ್ಳುವ ಮಾರ್ಗವನ್ನು ಸಿದ್ಧಪಡಿಸಲಾಗಿದೆ.
ಕಾರ್ಮಿಕರನ್ನು ಸ್ಥಳಾಂತರಿಸಿದ ನಂತರ ತಕ್ಷಣವೇ ವೈದ್ಯಕೀಯ ಸೇವೆಯನ್ನು ಒದಗಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ . ಕೊನೆಯ ಪೈಪ್ ಹಾಕಲಾಗುತ್ತಿದೆ ಎಂದು ಸ್ಥಳದಲ್ಲಿ ಕೆಲಸ ಮಾಡುವ ತಾಂತ್ರಿಕ ವರ್ಗ ತಿಳಿಸಿದೆ.
ಇದನ್ನೂ ಓದಿ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತ: ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರನ್ನು ತಲುಪಲು ಇನ್ನು 18 ಮೀಟರ್ ಬಾಕಿ
ಅವಶೇಷಗಳ ಮೂಲಕ 800 ಎಂಎಂ ವ್ಯಾಸದ ಉಕ್ಕಿನ ಪೈಪ್‌ಗಳನ್ನು ಕೊರೆಯಲು ನಿನ್ನೆ ತಡರಾತ್ರಿ ಕೆಲವು ಕಬ್ಬಿಣದ ರಾಡ್‌ಗಳು ಆಗರ್ ಯಂತ್ರಕ್ಕೆ ಅಡ್ಡಿಪಡಿಸಿದಾಗ ಸಣ್ಣ ಅಡಚಣೆಯಾಗಿದೆ.
ಸಿಲ್ಕ್ಯಾರಾ ಸುರಂಗದಿಂದ ಹೊರತರುವ ಕಾರ್ಮಿಕರನ್ನು ತಕ್ಷಣಕ್ಕೆ ಚಿಕಿತ್ಸೆಗೆ ಕರೆದೊಯ್ಯಲು ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ಪ್ರತ್ಯೇಕ ವಾರ್ಡ್ ನ್ನು ಸಿದ್ಧಪಡಿಸಲಾಗಿದೆ ಮತ್ತು 41 ಆಂಬ್ಯುಲೆನ್ಸ್‌ಗಳು ಸುರಂಗದ ಹೊರಗೆ ಕಾಯುತ್ತಿವೆ.