ಜೆಪಿ ನಡ್ಡಾ 
ದೇಶ

ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣಾ ಗ್ಯಾರಂಟಿಗಳನ್ನು ಜಾರಿಗೊಳಿಸಿಲ್ಲ, 'ಸುಳ್ಳು ಭರವಸೆ' ಬಗ್ಗೆ ಎಚ್ಚರದಿಂದಿರಿ: ಜೆಪಿ ನಡ್ಡಾ

ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಭರವಸೆಗಳನ್ನು ಅನುಷ್ಠಾನಗೊಳಿಸಿಲ್ಲ ಎಂದು ಆರೋಪಿಸಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಆರ್‌ಎಸ್ ಎರಡೂ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿವೆ ಎಂದು ಗುರುವಾರ ದೂರಿದ್ದಾರೆ.

ಹೈದರಾಬಾದ್: ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಭರವಸೆಗಳನ್ನು ಅನುಷ್ಠಾನಗೊಳಿಸಿಲ್ಲ ಎಂದು ಆರೋಪಿಸಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಆರ್‌ಎಸ್ ಎರಡೂ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿವೆ ಎಂದು ಗುರುವಾರ ದೂರಿದ್ದಾರೆ.

ಸಂಗಾರೆಡ್ಡಿ ಪಟ್ಟಣದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನಿರುದ್ಯೋಗ ಭತ್ಯೆ ಮತ್ತು 200 ಯೂನಿಟ್ ಉಚಿತ ವಿದ್ಯುತ್‌ನಂತಹ ಭರವಸೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಜನರು ಕಾಯುತ್ತಿದ್ದಾರೆ ಎಂದರು. 

'ಕಾಂಗ್ರೆಸ್ ಮತ್ತು ಕೆಸಿಆರ್ (ಬಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್) ಖಾತರಿಗಳ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಅಥವಾ ಕೆಸಿಆರ್ ಆಗಲಿ (ತೆಲಂಗಾಣದಲ್ಲಿ) ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮತ್ತು ಕುಟುಂಬ ಆಡಳಿತ ಗ್ಯಾರಂಟಿ' ಎಂದು ಅವರು ಹೇಳಿದರು.

ಬಡವರಿಗೆ ಡಬಲ್ ಬೆಡ್ ರೂಂ ಮನೆ ನೀಡುವುದು, ದಲಿತ ಬಂಧು ಯೋಜನೆ ಅನುಷ್ಠಾನ ಸೇರಿದಂತೆ ಚುನಾವಣಾ ಭರವಸೆಗಳ ಬಗ್ಗೆ ನಡ್ಡಾ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದರು.

ತೆಲಂಗಾಣದಲ್ಲಿ ಭ್ರಷ್ಟಾಚಾರ ಮತ್ತು ಕುಟುಂಬ ಆಡಳಿತದ ಆರೋಪದ ಬಗ್ಗೆಯೂ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್‌ ಯುದ್ಧಕ್ಕೆ ವಿರೋಧ: Hormuz ಬಂದ್ ಮಾಡಿದ್ರೆ ಜಾಗತಿಕ ವ್ಯಾಪಾರಕ್ಕೆ ಮಾರಕ: ಪುಟಿನ್-ಕ್ಸಿ ಜಂಟಿ ಹೇಳಿಕೆ

59 ವರ್ಷಗಳ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್​ಗೆ ಅಧಿಕಾರ ಹಂಚಿಕೆ; ನಾಳೆ ಸಚಿವರಾಗಿ ಇಬ್ಬರು ಪ್ರಮಾಣ

IPL 2026: ಮತ್ತೆ ಮುಗ್ಗರಿಸಿದ MI, KKRಗೆ 4 ವಿಕೆಟ್ ಜಯ, ಮುಂದುವರೆದ ಪ್ಲೇಆಫ್ ಸಸ್ಪನ್ಸ್!

'ದೇವಸ್ಥಾನಗಳಲ್ಲಿ ಅವಮಾನ ಅನುಭವಿಸಿದ್ದೆ': ಇಸ್ಲಾಂಗೆ ಮತಾಂತರವಾದ ತಮಿಳು ನಟ ಜೈ

ಹವಾಮಾನ: ಬಿಸಿಲಿನ ಝಳ, Heat wave ಗೆ ಉತ್ತರ ಭಾರತ ತತ್ತರ; ದೇಶದಲ್ಲೇ ಅತಿ ಹೆಚ್ಚು ತಾಪಮಾನ ಪ್ರದೇಶ ಯಾವುದು ಗೊತ್ತೇ?

SCROLL FOR NEXT