ದೇಶ

ಚೀನಾದಲ್ಲಿನ ಹೆಚ್9ಎನ್2 ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ: ಕೇಂದ್ರ ಸರ್ಕಾರ

Srinivas Rao BV

ನವದೆಹಲಿ: ಚೀನಾದಲ್ಲಿ ಹೆಚ್9ಎನ್2 ಪ್ರಕರಣಗಳು ಹೆಚ್ಚುತಿರುವ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 

ಹೆಚ್9 ಎನ್2 ಪ್ರಕರಣಗಳು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಉಸಿರಾಟದ ಸಮಸ್ಯೆ ಉಲ್ಬಣಗೊಂಡಿದೆ. ಚೀನಾದಲ್ಲಿ ವರದಿಯಾಗಿರುವ ಏವಿಯನ್ ಇನ್‌ಫ್ಲುಯೆಂಜಾ ಪ್ರಕರಣ ಹಾಗೂ ಉಸಿರಾಟದ ಕಾಯಿಲೆಯ ಸಮೂಹಗಳಿಂದ ಭಾರತಕ್ಕೆ ಕಡಿಮೆ ಅಪಾಯವಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಆ ದೇಶದಲ್ಲಿ ಪ್ರಸ್ತುತ ಇನ್‌ಫ್ಲುಯೆಂಜಾ ಪರಿಸ್ಥಿತಿಯಿಂದ ಹೊರಹೊಮ್ಮಬಹುದಾದ ಯಾವುದೇ ರೀತಿಯ ತುರ್ತುಸ್ಥಿತಿಯನ್ನು ಎದುರಿಸುವುದಕ್ಕೆ ಭಾರತ ಸಿದ್ಧವಾಗಿದೆ ಎಂದು ಸಚಿವಾಲಯ ಹೇಳಿದೆ.

ಕೆಲವು ಮಾಧ್ಯಮ ವರದಿಗಳು ಉತ್ತರ ಚೀನಾದಲ್ಲಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಪ್ರಕರಣಗಳ ಕ್ಲಸ್ಟರಿಂಗ್ ನ್ನು ವರದಿ ಮಾಡಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಹೇಳಿಕೆಯನ್ನು ನೀಡಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ವಾರಗಳಲ್ಲಿ ಚೀನಾದಲ್ಲಿ ಉಸಿರಾಟದ ಕಾಯಿಲೆಗಳ ಹೆಚ್ಚಳವು ವರದಿಯಾಗಿದೆ. ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಸಾಮಾನ್ಯ ಕಾರಣಗಳನ್ನು ಸೂಚಿಸಲಾಗಿದೆ ಮತ್ತು ಅಸಾಮಾನ್ಯ ರೋಗಕಾರಕ ಅಥವಾ ಯಾವುದೇ ಅನಿರೀಕ್ಷಿತ ಕ್ಲಿನಿಕಲ್ ಸಮಸ್ಯೆಗಳನ್ನು ಗುರುತಿಸಲಾಗಿಲ್ಲ" ಎಂದು ಸಚಿವಾಲಯ ತಿಳಿಸಿದೆ.

SCROLL FOR NEXT