ದೇಶ

ಪ್ರಧಾನಿ ಮೋದಿ ಭದ್ರತಾ ಉಲ್ಲಂಘನೆ: ಪಂಜಾಬ್ ಎಸ್ ಪಿ ಸೇರಿ 7 ಮಂದಿ ಅಮಾನತು

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಪಂಜಾಬ್ ಎಸ್ ಪಿ ಸೇರಿದಂತೆ 7 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 

ಕಳೆದ ವರ್ಷ ಜನವರಿಯಲ್ಲಿ ಪ್ರಧಾನಿ ಮೋದಿ ಪಂಜಾಬ್ ಗೆ ಭೇಟಿ ನೀಡಿದ್ದಾಗ ಭದ್ರತಾ ಉಲಂಘನೆಯಾಗಿತ್ತು. ಈ ವೇಳೆ ಕರ್ತವ್ಯ ಲೋಪ ಉಂಟುಮಾಡಿದ್ದ ಆರೋಪದಲ್ಲಿ ಬಟಿಂಡಾ ಎಸ್ ಪಿ ಸೇರಿದಂತೆ 7 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 

ಎಸ್ ಪಿ ಗುರ್ಬಿಂದರ್ ಸಿಂಗ್, ಡಿವೈಎಸ್ ಪಿ ಪರ್ಸೋನ್ ಸಿಂಗ್, ಡಿಎಸ್ ಪಿ ಜಗದೀಶ್ ಕುಮಾರ್, ಮೂವರು ಇನ್ಸ್ಪೆಕ್ಟರ್ ಗಳಾದ ತೇಜೇಂದ್ರ ಸಿಂಗ್, ಬಲ್ವಿಂದರ್ ಸಿಂಗ್ ಹಾಗೂ ಜತೀಂದರ್ ಸಿಂಗ್, ಓರ್ವ ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಕೇಶ್ ಕುಮಾರ್ ನ್ನು ಅಮಾನತುಗೊಳಿಸಲಾಗಿದೆ. 

ಅಧಿಕಾರಿ, ಗುರ್ಬಿಂದರ್ ಸಿಂಗ್, ಘಟನೆಯ ಸಮಯದಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ (ಕಾರ್ಯಾಚರಣೆ) ಆಗಿ ನೇಮಕಗೊಂಡರು ಮತ್ತು ಫಿರೋಜ್‌ಪುರದಲ್ಲಿ ಕರ್ತವ್ಯದಲ್ಲಿದ್ದರು.
             
ಪಂಜಾಬ್ ಗೃಹ ಇಲಾಖೆ ಬುಧವಾರ ಹೊರಡಿಸಿದ ಆದೇಶದ ಪ್ರಕಾರ, ಪ್ರಸ್ತುತ ಬಟಿಂಡಾ ಜಿಲ್ಲೆಯಲ್ಲಿ ಎಸ್ಪಿಯಾಗಿ ನೇಮಕಗೊಂಡಿರುವ ಸಿಂಗ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. 

SCROLL FOR NEXT