ಎಫ್ಐಆರ್ (ಸಾಂಕೇತಿಕ ಚಿತ್ರ) 
ದೇಶ

ಪಶ್ಚಿಮ ಬಂಗಾಳ: ರಾಷ್ಟ್ರಗೀತೆಗೆ ಅವಮಾನ ಮಾಡಿದ 12 ಬಿಜೆಪಿ ಶಾಸಕರ ವಿರುದ್ಧ ಎಫ್‌ಐಆರ್ ದಾಖಲು

ರಾಜ್ಯ ವಿಧಾನಸಭೆ ಆವರಣದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಗುರುವಾರ 12 ಬಿಜೆಪಿ ಶಾಸಕರ ವಿರುದ್ಧ ಹರೆ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಕೋಲ್ಕತ್ತಾ: ರಾಜ್ಯ ವಿಧಾನಸಭೆ ಆವರಣದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಗುರುವಾರ 12 ಬಿಜೆಪಿ ಶಾಸಕರ ವಿರುದ್ಧ ಹರೆ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಶಾಸಕರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಸುವೇಂದು ಅಧಿಕಾರಿ ಮತ್ತು ಸದನದಲ್ಲಿ ಪಕ್ಷದ ಮುಖ್ಯ ಸಚೇತಕ ಮನೋಜ್ ತಿಗ್ಗಾ ಸೇರಿದ್ದಾರೆ.

ಕೇಂದ್ರ ಪ್ರಾಯೋಜಿತ ವಿವಿಧ ಯೋಜನೆಗಳಡಿ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ ಬಾಕಿ ಹಣ ಪಾವತಿಯಾಗದಿರುವುದನ್ನು ವಿರೋಧಿಸಿ ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್‌ನ ಶಾಸಕರು ಕಪ್ಪು ಬಟ್ಟೆ ಧರಿಸಿ ವಿಧಾನಸಭೆ ಆವರಣದಲ್ಲಿನ ಬಿಆರ್‌ ಅಂಬೇಡ್ಕರ್  ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗೊಂದಲ ಆರಂಭವಾಯಿತು. 

ಪ್ರತಿಭಟನೆ ಮುಕ್ತಾಯದ ವೇಳೆಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಪಕ್ಷದ ಮೆಗಾ ರ್ಯಾಲಿಗೆ ತೆರಳಲು ವಿಪಕ್ಷ ನಾಯಕನ ನೇತೃತ್ವದ ಬಿಜೆಪಿ ಶಾಸಕರ ಗುಂಪು ವಿಧಾನಸಭೆ ಆವರಣಕ್ಕೆ ಆಗಮಿಸಿತು.

ವಿಪಕ್ಷ ನಾಯಕ ಸೇರಿದಂತೆ ಶಾಸಕರು ಪ್ರತಿಭಟನಾನಿರತರಾಗಿದ್ದವರ ನೋಡಿ 'ಕಳ್ಳರು, ಕಳ್ಳರು' ಎಂದು ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿತು.

ಆಡಳಿತ ಪಕ್ಷದ ಶಾಸಕರು ರಾಷ್ಟ್ರಗೀತೆ ಹಾಡುತ್ತಿದ್ದಾಗ ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಅವರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯ ಅವರಿಗೆ ದೂರಿದರು. ಈ ವಿಚಾರದಲ್ಲಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.

ಸ್ಪೀಕರ್ ತಕ್ಷಣವೇ ಕೋಲ್ಕತ್ತಾ ಪೊಲೀಸ್‌ನ ಉಪ ಆಯುಕ್ತರನ್ನು (ಕೇಂದ್ರ ವಿಭಾಗ) ಕರೆದರು ಮತ್ತು ಮೂವರು ತೃಣಮೂಲ ಕಾಂಗ್ರೆಸ್ ಶಾಸಕರು ಈ ಬಗ್ಗೆ ದೂರು ಪತ್ರವನ್ನು ಅವರಿಗೆ ನೀಡಿದರು. ಈ ದೂರಿನ ಆಧಾರದ ಮೇಲೆ 12 ಬಿಜೆಪಿ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಾಂಗ್ರೆಸ್, ಚಾಮುಂಡಿ ಬೆಟ್ಟವನ್ನು 'ಟೂಲ್‌ಕಿಟ್' ಆಗಿ ಬಳಸುತ್ತಿದೆ: ಆರ್ ಅಶೋಕ್

ಉಡುಪಿ: ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

'HAL ನಿರ್ಮಿತ ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ ಗಳು ಹಸ್ತಾಂತರಕ್ಕೆ ಸಿದ್ಧ': ರಕ್ಷಣಾ ಕಾರ್ಯದರ್ಶಿ

Dharmasthala Case: NIA ತನಿಖೆ ಅಗತ್ಯವಿಲ್ಲ, SITಗೆ ಸ್ವಾತಂತ್ರ್ಯ ನೀಡಲಾಗಿದೆ; ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್‌ನಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆ; ಪ್ರವಾಹ, ಭೂಕುಸಿತದ ಬಗ್ಗೆ IMD ಎಚ್ಚರಿಕೆ

SCROLL FOR NEXT