ದೇಶ

ಬಿಹಾರ ಜಾತಿ ಸಮೀಕ್ಷೆ ಬಹಿರಂಗ: ವಿವರ ಹೀಗಿದೆ... 

Srinivas Rao BV

ಬಿಹಾರ: ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಅ.02 ರಂದು ಜಾತಿ ಸಮೀಕ್ಷೆಯ ವಿವರಗಳನ್ನು ಬಹಿರಂಗಗೊಳಿಸಿದೆ.

ಸಮೀಕ್ಷೆಯ ಪ್ರಕಾರ ಒಬಿಸಿ ಹಾಗೂ ಅತಿ ಹಿಂದುಳಿದ ವರ್ಗಗಳು ರಾಜ್ಯದ ಜನಸಂಖ್ಯೆಯ ಶೇ.63 ರಷ್ಟಿದ್ದಾರೆ. ಅಭಿವೃದ್ಧಿ ಆಯುಕ್ತ ವಿವೇಕ್ ಸಿಂಗ್ ಈ ಅಂಕಿ-ಅಂಶಗಳನ್ನು ಬಹಿರಂಗಗೊಳಿಸಿದ್ದು,  ರಾಜ್ಯದಲ್ಲಿ ಒಟ್ಟು 13.07 ಕೋಟಿ ಜನ ಸಂಖ್ಯೆ ಇದ್ದರೆ,  ಈ ಪೈಕಿ ಶೇ.36 ರಷ್ಟು ಅತಿ ಹಿಂದುಳಿದ ವರ್ಗಗಳ ಜನರಿದ್ದಾರೆ.  ಈ ನಂತರದ ಸ್ಥಾನದಲ್ಲಿ ಒಬಿಸಿ ವರ್ಗಕ್ಕೆ ಸೇರಿದ ಮಂದಿ ಒಟ್ಟು ಶೇ.27.13 ರಷ್ಟಿದ್ದಾರೆ.

ಒಬಿಸಿ ಗುಂಪಿಗೆ ಸೇರುವ ಯಾದವರು, ಡಿಸಿಎಂ ತೇಜಸ್ವಿ ಯಾದವ್ ಅವರು ಪ್ರತಿನಿಧಿಸುವ ಸಮುದಾಯ ಜನಸಂಖ್ಯೆಯ ಪೈಕಿ ಅತಿ ಹೆಚ್ಚು ಪ್ರಮಾಣದಲ್ಲಿ ಅಂದರೆ ಶೇ.14.27 ರಷ್ಟು ಇದ್ದಾರೆ. 

ವಿಶೇಷವೆಂದರೆ, ಕಳೆದ ವರ್ಷ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಜನಗಣತಿಯ ಭಾಗವಾಗಿ ಎಸ್‌ಸಿ ಮತ್ತು ಎಸ್‌ಟಿಗಳನ್ನು ಹೊರತುಪಡಿಸಿ ಇತರ ಜಾತಿಗಳ ಎಣಿಕೆಯನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಸಮೀಕ್ಷೆಗೆ ಬಿಹಾರದಲ್ಲಿ ಆದೇಶಿಸಲಾಗಿತ್ತು.

SCROLL FOR NEXT