ದೇಶ

ಅವಳಿ ಕೊಲೆ ಪ್ರಕರಣದಲ್ಲಿ ಕಲಾವಿದ ಚಿಂತನ್ ಉಪಾಧ್ಯಾಯ ತಪ್ಪಿತಸ್ಥ: ಕೋರ್ಟ್ ತೀರ್ಪು 

Srinivas Rao BV

ನವದೆಹಲಿ: ಕಲಾವಿದ ಚಿಂತನ್ ಉಪಾಧ್ಯಾಯ ಅವಳಿ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಮುಂಬೈ ನ ಸೆಷನ್ಸ್ ಕೋರ್ಟ್ ತೀರ್ಪು ಪ್ರಕಟಿಸಿದೆ.

ಪತ್ನಿ ಹೇಮಾ ಉಪಾಧ್ಯಾಯ ಹಾಗೂ ಆಕೆಯ ವಕೀಲರಾದ ಹರೀಶ್ ಭಂಭನಿ ಅವರನ್ನು ಹತ್ಯೆ ಮಾಡಿದ ಆರೋಪ ಚಿಂತನ್ ಉಪಾಧ್ಯಾಯ ವಿರುದ್ಧ ಕೇಳಿಬಂದಿತ್ತು.

ವಿಜಯ್ ರಾಜ್ಭರ್, ಪ್ರದೀಪ್ ರಾಜ್ಭರ್, ಶಿವಕುಮಾರ್ ರಾಜ್ಭರ್, ಆಜಾದ್ ರಾಜ್ಭರ್ ಅವರುಗಳ ವಿರುದ್ಧದ ಆರೋಪವೂ ಪ್ರಕರಣದಲ್ಲಿ ಸಾಬೀತಾಗಿದೆ.

2015 ರ ಡಿ.11 ರಂದು ಹೇಮಾ ಉಪಾಧ್ಯಾಯ ಹಾಗೂ ಭಂಭನಿ ಅವರನ್ನು ಹತ್ಯೆ ಮಾಡಲಾಗಿತ್ತು. ಅವರ ಮೃತದೇಹಗಳು ಮುಂಬೈನ ಕಂಡಿವಲಿ ಪ್ರದೇಶದ ಹಳ್ಳದಲ್ಲಿ ಪತ್ತೆಯಾಗಿತ್ತು.

ಉಪನಗರ ದಿಂಡೋಶಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್ ವೈ ಭೋಸಲೆ, ಉಪಾಧ್ಯಾಯ ಅವರ ಪತ್ನಿ ಮತ್ತು ಅವರ ವಕೀಲರನ್ನು ಕೊಲ್ಲಲು ಕುಮ್ಮಕ್ಕು ನೀಡಿದ ಮತ್ತು ಸಂಚು ರೂಪಿಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದರು.

ಶಿಕ್ಷೆಯ ಪ್ರಮಾಣ ಕುರಿತ ವಿಚಾರಣೆ ಶನಿವಾರ ನಡೆಯಲಿದೆ.

SCROLL FOR NEXT