ದೇಶ

ಚಂದ್ರಬಾಬು ನಾಯ್ಡು ಬೆಂಬಲಿಸಲು ಎನ್ ಡಿಎ ತೊರೆದ ಪವನ್ ಕಲ್ಯಾಣ್!

Nagaraja AB

ಪೆಡನಾ: ಕಷ್ಟದ ಸಮಯದಲ್ಲಿ ಟಿಡಿಪಿಯನ್ನು ಬೆಂಬಲಿಸಲು ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರಬಂದಿರುವುದಾಗಿ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಗುರುವಾರ ಹೇಳಿದ್ದಾರೆ. ಆಂಧ್ರಪ್ರದೇಶದ ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಜನಸೇನಾ ಟಿಡಿಪಿ ಅಗತ್ಯವಿದೆ ಎಂದಿದ್ದಾರೆ.

ಕೃಷ್ಣಾ ಜಿಲ್ಲೆಯ ಪೆಡನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಟಿಡಿಪಿ ಬಲಿಷ್ಠ ಪಕ್ಷವಾಗಿದ್ದು, ಆಂಧ್ರಪ್ರದೇಶದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿಗಾಗಿ ತೆಲುಗು ದೇಶಂ ಪಕ್ಷದ ಅಗತ್ಯವಿದೆ. ಇಂದು ಟಿಡಿಪಿ ಹೋರಾಟದಲ್ಲಿದ್ದು, ನಾವು ಅವರನ್ನು ಬೆಂಬಲಿಸುತ್ತೇವೆ. ಈ ಪರಿಸ್ಥಿತಿಯಲ್ಲಿ ಟಿಡಿಪಿಗೆ  ಜನಸೇನಾ ಯುವ ರಕ್ತದ ಬೆಂಬಲ ಬೇಕು. ಟಿಡಿಪಿ ಮತ್ತು ಜನಸೇನೆ ಕೈಜೋಡಿಸಿದರೆ ರಾಜ್ಯದಲ್ಲಿ ವೈಎಸ್‌ಆರ್‌ಸಿಪಿ ಮುಳುಗಲಿದೆ ಎಂದರು. 

ಸೆಪ್ಟೆಂಬರ್ 14 ರಂದು  ಕೌಶಲ್ಯ ಅಭಿವೃದ್ಧಿ ಹಗರಣ  ದಲ್ಲಿ ಚಂದ್ರಬಾಬು ನಾಯ್ಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲ್ಪಟ್ಟ ನಂತರ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಅವರನ್ನು ಪವನ್ ಕಲ್ಯಾಣ್ ಭೇಟಿ ಮಾಡಿದ್ದರು. ಜುಲೈ 18 ರಂದು ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಭಾಗವಹಿಸಿದ್ದರು. ಸಭೆಯ ನಂತರ ಮಾತನಾಡಿದ ನಟ, ರಾಜಕಾರಣಿ ತಮ್ಮ ಪಕ್ಷವು ಪಿಎಂ ಮೋದಿ ಅವರ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದರು. 

"ಇಡೀ ಸಭೆಯು ತುಂಬಾ ಚೆನ್ನಾಗಿತ್ತು ಮತ್ತು ಆತ್ಮನಿರ್ಭರ್ ಭಾರತ್, ಕೌಶಲ್ಯ ಭಾರತವನ್ನು ಚರ್ಚಿಸಿದ್ದೇವೆ ಮತ್ತು ನಮ್ಮ ಪಕ್ಷದ ಕಡೆಯಿಂದ ಪ್ರಧಾನಿ ಮೋದಿಯವರ ದೃಷ್ಟಿಕೋನವನ್ನು ಬೆಂಬಲಿಸುತ್ತೇವೆಎಂದು ಭರವಸೆ ನೀಡಿದ್ದೇನೆ" ಎಂದು ಪವನ್ ಕಲ್ಯಾಣ್ ಹೇಳಿದ್ದರು. 

SCROLL FOR NEXT