ದೇಶ

ಅಕ್ರಮವಾಗಿ ಬಂಧಿಸಿದ್ದ ವ್ಯಕ್ತಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲು ದೆಹಲಿ ಹೈಕೋರ್ಟ್ ಆದೇಶ

Srinivas Rao BV

ನವದೆಹಲಿ: ಪೊಲೀಸರಿಂದ ಅಕ್ರಮವಾಗಿ ಬಂಧನಕ್ಕೊಳಗಾಗಿದ್ದ ವ್ಯಕ್ತಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲು ದೆಹಲಿ ಹೈಕೋರ್ಟ್ ಆದೇಶ ನೀಡಿದೆ. 

ವ್ಯಕ್ತಿಯೋರ್ವ ಅಕ್ರಮವಾಗಿ ಬಂಧನಕ್ಕೆ ಒಳಪಟ್ಟು ಅರ್ಧ ಗಂಟೆ ಲಾಕ್ ಅಪ್ ನಲ್ಲಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್, ಅಧಿಕಾರಿಗಳ ವರ್ತನೆ ಆತಂಕ ಮೂಡಿಸುತ್ತಿದ್ದು, ಅಧಿಕಾರಿಗಳು ಜನರನ್ನು ನಡೆಸಿಕೊಳ್ಳುವ ಬಗ್ಗೆ ಬೇಸರವಾಗುತ್ತಿದೆ ಎಂದು ಕೋರ್ಟ್ ಹೇಳಿದೆ.

ಸ್ಪಷ್ಟ ಸಂದೇಶ ರವಾನೆ ಮಾಡುವುದಕ್ಕಾಗಿ ನ್ಯಾ.ಸುಬ್ರಮಣ್ಯ ಪ್ರಸಾದ್, ಪರಿಹಾರ ಮೊತ್ತವನ್ನು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವೇತನದಿಂದ ಕಡಿತಗೊಳಿಸಬೇಕು ಎಂದು ಆದೇಶಿಸಿದ್ದಾರೆ. 

ಅರ್ಜಿದಾರನ ಸ್ವಾತಂತ್ರ್ಯವನ್ನು ಗೌರವಿಸದೇ ಅಥವಾ ಯಾವುದೇ ಕಾರಣವನ್ನೂ ನೀಡದೇ, ಪಾಲಿಸಬೇಕಾದ ಪ್ರಕ್ರಿಯೆಗಳನ್ನು ಪಾಲಿಸದೇ ಲಾಕ್ ಅಪ್ ನಲ್ಲಿ ಬಂಧಿಸಿಟ್ಟು ಮನಸೋ ಇಚ್ಛೆ ವರ್ತಿಸಿದ್ದಾರೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

"ಅರ್ಜಿದಾರರು ಲಾಕ್-ಅಪ್‌ನಲ್ಲಿ ಕಳೆದ ಸಮಯ, ಸ್ವಲ್ಪ ಸಮಯವೇ ಆದರೂ ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನವನ್ನು ಅನುಸರಿಸದೆ ಅರ್ಜಿದಾರರ ಸ್ವಾತಂತ್ರ್ಯವನ್ನು ಕಸಿದುಕೊಂಡ ಪೊಲೀಸ್ ಅಧಿಕಾರಿಗಳನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ" ಎಂದು ತನ್ನ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.  

SCROLL FOR NEXT