ದೇಶ

ಮೂಕ ವಕೀಲೆಗೆ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ನೇಮಕ ಮಾಡಿದ ಸುಪ್ರೀಂ ಕೋರ್ಟ್

Srinivas Rao BV

ನವದೆಹಲಿ: ವಾಕ್- ಶ್ರವಣ ದೋಷವುಳ್ಳ ವಕೀಲೆಗೆ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು (ಇಂಟಪ್ರಿಟರ್) ಸುಪ್ರೀಂ ಕೋರ್ಟ್ ಅ.06 ರಂದು ನೇಮಕ ಮಾಡಿದೆ.
 
ಸಾರ ಸನ್ನಿ ಎಂಬ ವಾಕ್ ಶ್ರವಣ ದೋಷವುಳ್ಳ ನ್ಯಾಯವಾದಿಗೆ ಸುಪ್ರೀಂ ಕೋರ್ಟ್ ವ್ಯಾಖ್ಯಾನಕಾರರನ್ನು ನೇಮಕ ಮಾಡಿದ್ದು, ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದ ವಾಕ್- ಶ್ರವಣ ದೋಷವುಳ್ಳ ಮೊದಲ ವಕೀಲೆಯಾಗಿದ್ದಾರೆ. 

ಸಾರ ಸನ್ನಿ ಅವರ ಹಿರಿಯ ಸಹೋದ್ಯೋಗಿ ಸಂಚಿತ ಎಂಬುವವರು, ಸಾರಾ ಸನ್ನಿಗೆ ಇಂಟರ್ಪ್ರಿಟರ್ ನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು.

"ನಾವು ಇಂದು ಸಾರಾ ಅವರಿಗಾಗಿ ಇಂಟರ್ಪ್ರಿಟರ್ ಅನ್ನು ಹೊಂದಿದ್ದೇವೆ. ವಾಸ್ತವವಾಗಿ, ಸಂವಿಧಾನ ಪೀಠದ ವಿಚಾರಣೆಗಳಿಗೆ ನಾವು ಇಂಟರ್ಪ್ರಿಟರ್ ಅನ್ನು ಹೊಂದಿದ್ದೇವೆ ಎಂದು ನಾವು ಯೋಚಿಸುತ್ತಿದ್ದೇವೆ, ಆದ್ದರಿಂದ ಎಲ್ಲರೂ ಅನುಸರಿಸಬಹುದು" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. ವರ್ಚುವಲ್ ವಿಚಾರಣೆಯಲ್ಲಿನ ವಿಚಾರಣೆಯ ಸಮಯದಲ್ಲಿ ಇಂಟರ್ಪ್ರಿಟರ್ ಸಾರಾಗೆ ಸಹಾಯ ಮಾಡುತ್ತಿದ್ದಾರೆ.
 

SCROLL FOR NEXT