ದೇಶ

ಹಮಾಸ್ ಉಗ್ರರಿಗೆ ಚಿಕಿತ್ಸೆ ನೀಡದಂತೆ ಆಸ್ಪತ್ರೆಗಳಿಗೆ ಇಸ್ರೇಲ್ ಆದೇಶ

Lingaraj Badiger

ಜೆರುಸಲೇಂ: ಹಮಾಸ್ ಉಗ್ರರಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸುವಂತೆ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಿಗೆ ಇಸ್ರೇಲ್‌ ನಿರ್ಗಮಿತ ಆರೋಗ್ಯ ಸಚಿವ ಮೋಶೆ ಅರ್ಬೆಲ್ ಅವರು ಸೂಚನೆ ನೀಡಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಆರೋಗ್ಯ ಸಚಿವರು ಬುಧವಾರ ಸಂಜೆ ಪತ್ರ ಬರೆದಿದ್ದು, "ದಾಳಿಯ ನಂತರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಮಾಸ್ ಭಯೋತ್ಪಾದಕರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಆರೋಗ್ಯ ವ್ಯವಸ್ಥೆಯಲ್ಲಿ ಭಾರಿ ತೊಂದರೆ ಉಂಟುಮಾಡಿದೆ" ಎಂದು ಹೇಳಿದ್ದಾರೆ.

"ಈ ಕಷ್ಟದ ಸಮಯದಲ್ಲಿ, ಆರೋಗ್ಯ ವ್ಯವಸ್ಥೆಯು ಕ್ರಿಮಿನಲ್ ಹತ್ಯಾಕಾಂಡದ ಸಂತ್ರಸ್ತರ ಚಿಕಿತ್ಸೆ, IDF ಸೈನಿಕರು ಮತ್ತು ಮುಂದಿನ[ದಾಳಿಗೆ] ಸನ್ನದ್ಧತೆಯ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು" ಎಂದು ಅರ್ಬೆಲ್ ವಿವರಿಸಿದ್ದಾರೆ.

"ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಶಾಪಗ್ರಸ್ತ ಮತ್ತು ಹೇಯ ಕೃತ್ಯ ಎಸಗುತ್ತಿರುವ ಉಗ್ರರನ್ನು ರಕ್ಷಿಸುವ ಮತ್ತು ಚಿಕಿತ್ಸೆ ನೀಡುವ ಕಾರ್ಯ ಗಮನಾರ್ಹವಾಗಿ ಹಾನಿ ಮಾಡುತ್ತಿದೆ. ಆದ್ದರಿಂದ, ನನ್ನ ಸೂಚನೆಯಂತೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಉಗ್ರರಿಗೆ ಚಿಕಿತ್ಸೆ ನೀಡುವುದಿಲ್ಲ" ಎಂದು ಇಸ್ರೇಲ್ ಪ್ರಧಾನಿಗೆ ತಿಳಿಸಿದ್ದಾರೆ.

ಹೊಸ ಆದೇಶಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಂಬಂಧಿತ ಸಂಸ್ಥೆಗಳಿಗೆ "ತಕ್ಷಣ" ಸೂಚನೆ ನೀಡುವಂತೆ ಅರ್ಬೆಲ್ ನೆತನ್ಯಾಹು ಅವರಿಗೆ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.

SCROLL FOR NEXT