ಮುಂಬೈ ನಲ್ಲಿ ವಾಯುಗುಣಮಟ್ಟ ಕುಸಿತ 
ದೇಶ

ಮುಂಬೈಗೆ ಮಂಜಿನ ಹೊದಿಕೆ: ದೆಹಲಿಗಿಂತಲೂ ಹೆಚ್ಚಿನ ಪ್ರಮಾಣದ ಪಿಎಂ10 ಮಟ್ಟ

ಮುಂಬೈ ಮಂಜಿನ ಹೊದಿಕೆಯಿಂದ ಆವೃತಗೊಂಡಿದ್ದು, ವಾಯುಗುಣಮಟ್ಟ ಕುಸಿದಿದೆ. 

ಮುಂಬೈ: ಮುಂಬೈ ಮಂಜಿನ ಹೊದಿಕೆಯಿಂದ ಆವೃತಗೊಂಡಿದ್ದು, ವಾಯುಗುಣಮಟ್ಟ ಕುಸಿದಿದೆ. ಮಧ್ಯಮ ವಿಭಾಗದಲ್ಲಿ ಗಾಳಿಯ ಗುಣಮಟ್ಟ ದಾಖಲಾಗಿದ್ದು, ಈ ವಾತಾವರಣ ಕಳೆದ ಮೂರು ದಿನಗಳಿಂದ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾರಾಲಜಿ -ಮ್ಯಾನೇಜ್ಡ್ ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ಪ್ರಕಾರ ಬುಧವಾರ (ಅ.18) ಸಂಜೆ 6 ಗಂಟೆ ವೇಳೆಗೆ ಮುಂಬೈ ನ ಗಾಳಿಯ ಪಿಎಂ10 ಮಟ್ಟ 143 ಇದ್ದರೆ, ದೆಹಲಿಯಲ್ಲಿ 122 ದಾಖಲಾಗಿದೆ. 

"ತೇವಾಂಶದ ಲಭ್ಯತೆ, ಆ್ಯಂಟಿ ಸೈಕ್ಲೋನಿಕ್ ವಿಂಡ್ ಪರಿಚಲನೆಯು ಗಾಳಿಯನ್ನು ಏರಲು ಬಿಡುವುದಿಲ್ಲ. ಆ್ಯಂಟಿ ಸೈಕ್ಲೋನ್ ಮುಂಬೈ ಮೇಲೆ ಇದೆ, ಇದರಿಂದಾಗಿ ತೇವಾಂಶವು ಗಾಳಿಯಲ್ಲಿ ಸಿಲುಕಿಕೊಳ್ಳುತ್ತದೆ ಎಂದು ಭಾರತದ ಹವಾಮಾನ ಇಲಾಖೆಯ ವಿಜ್ಞಾನಿ ಸುಷ್ಮಾ ನಾಯರ್ ಹೇಳಿದ್ದಾರೆ.

ಹದಗೆಡುತ್ತಿರುವ ಗಾಳಿಯ ಮಟ್ಟದಿಂದ ಉಸಿರಾಟದ ಕಾಯಿಲೆಗಳು ಬರುತ್ತವೆ ಎಂದು ವೈದ್ಯಕೀಯ ವೃತ್ತಿಪರರು ಹೇಳಿದ್ದಾರೆ. ಸರ್ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಪಲ್ಮನರಿ ಮೆಡಿಸಿನ್ ವಿಭಾಗದ ಮಾರ್ಗದರ್ಶಕ ಡಾ ರಾಜೇಶ್ ಶರ್ಮಾ ಮಾತನಾಡಿ, ಸಾಮಾನ್ಯವಾಗಿ ಗಾಳಿಯ ಗುಣಮಟ್ಟ ತೀರಾ ಕಳಪೆಯಾದಾಗ ಅದರಲ್ಲಿ, ಪೀಠೋಪಕರಣಗಳ ತಯಾರಿಕೆಗೆ ಅಥವಾ ಪಾಲಿಶ್ ಮತ್ತು ಪೇಂಟಿಂಗ್ ಕೆಲಸಗಳಿಗೆ, ಕಟ್ಟಡಗಳಲ್ಲಿ ಬಳಸಲಾಗುವ ಹೆಚ್ಚಿನ ಕಣಗಳು ಅನಿಲಗಳು ಮತ್ತು ರಾಸಾಯನಿಕಗಳನ್ನು ಇರುತ್ತದೆ ಎಂದು ಹೇಳಿದ್ದಾರೆ. 

"ಗಾಳಿಯ ಗುಣಮಟ್ಟವು ನಿಜವಾಗಿಯೂ ಕೆಟ್ಟದಾಗಿದ್ದರೆ ಮತ್ತು ಜನರು ನಿರಂತರವಾಗಿ ಇದನ್ನು (ಕಳಪೆ ಗಾಳಿ) ಉಸಿರಾಡುತ್ತಿದ್ದರೆ, ಅವರಿಗೆ ಬ್ರಾಂಕೈಟಿಸ್ ಎದುರಾಗುತ್ತದೆ. ದೀರ್ಘಾವಧಿಯಲ್ಲಿ ಕಳಪೆ ಗಾಳಿಯ ಗುಣಮಟ್ಟ ಮತ್ತು ಕೆಮ್ಮು, ಉಸಿರಾಟದ ತೊಂದರೆ ಮತ್ತು ಉಬ್ಬಸದಿಂದ ಹಿಡಿದು ಹದಗೆಡುತ್ತಿರುವ ರೋಗಲಕ್ಷಣಗಳ ನಡುವೆ ಒಂದು ನಿರ್ದಿಷ್ಟ ಸಂಬಂಧವಿದೆ ಎಂದು " ಶರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT