ದೇಶ

ಅದಾನಿ ಸಂಧಾನಕಾರರಾಗಿ ಇಬ್ಬರು ಸಂಸದರು ನನ್ನನ್ನು ಸಂಪರ್ಕಿಸಿದ್ದರು: ಮಹುವಾ ಮೊಯಿತ್ರಾ

Lingaraj Badiger

ನವದೆಹಲಿ: ಲೋಕಸಭೆಯ ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆ ಕೇಳುವುದಕ್ಕೆ ಪ್ರತಿಯಾಗಿ ಭಾರಿ ಮೊತ್ತದ ಹಣ ಹಾಗೂ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು ಎಂಬ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು, ಪ್ರಶ್ನೆ ಕೇಳುವುದಕ್ಕೆ "ಹಣ" ನೀಡುವ ಬದಲು "ಪ್ರಶ್ನೆ ಮಾಡದಿರಲು ಹಣ ನೀಡಲು ಬಂದಿದ್ದರು ಎಂದು ಹೇಳಿದ್ದಾರೆ.

ಪ್ರಶ್ನೆಗೆಗಾಗಿ ಹಣ ಪ್ರಕರಣ ಸಂಬಂಧ ಮಹುವಾ ಅವರು ಸಂಸತ್ ನ ನೈತಿಕ ಸಮಿತಿಯ ಮುಂದೆ ಅಕ್ಟೋಬರ್ 31 ರಂದು ವಿಚಾರಣೆಗೆ ಹಾಜರಾಗಬೇಕಿದೆ. 

ಶುಕ್ರವಾರ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಧಾನಕಾರರಾಗಿ ಕಳೆದ ಮೂರು ವರ್ಷಗಳಲ್ಲಿ ಇಬ್ಬರು ಸಂಸದರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಟಿಎಂಸಿ ಸಂಸದೆ ಹೇಳಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರು ಅದಾನಿ ಅವರನ್ನು ಗುರಿಯಾಗಿಸಿಕೊಂಡು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಹಣ ಮತ್ತು ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

“ಕಳೆದ ಮೂರು ವರ್ಷಗಳಲ್ಲಿ ಇಬ್ಬರು ಲೋಕಸಭಾ ಸಂಸದರ ಮೂಲಕ ಅದಾನಿ ಅವರು ನನ್ನನ್ನು ಸಂಪರ್ಕಿಸಿದ್ದು, ಕುಳಿತು ಮಾತನಾಡಿ ಒಂದು ಒಪ್ಪಂದಕ್ಕೆ ಬರುವಂತೆ ಕೇಳಿಕೊಂಡಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೇನೆ. ಅವರು ಪ್ರಶ್ನಿಸದಿರಲು ಹಣ ನೀಡಲು ಬಂದಿದ್ದರು ” ಎಂದು ಮಹುವಾ ಹೇಳಿದ್ದಾರೆ. ಆದರೆ ತಮ್ಮನ್ನು ಸಂಪರ್ಕಿಸಿದ ಸಂಸದರ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ.

ಕಳೆದ ವಾರ ಸಹ ಚುನಾವಣೆ ಮುಗಿಯುವವರೆಗೆ, ಆರು ತಿಂಗಳ ಕಾಲ ಮೌನವಾಗಿರುವಂತೆ ನನಗೆ ಸಂದೇಶ ಕಳುಹಿಸಿದ್ದಾರೆ ಎಂದು ಟಿಎಂಸಿ ಸಂಸದೆ ತಿಳಿಸಿದ್ದಾರೆ.

“ಕಳೆದ ವಾರ ಸಹ, ಇದನ್ನೆಲ್ಲಾ ಕೊನೆಗೊಳಿಸಿ. ಆರು ತಿಂಗಳ ಕಾಲ ಸುಮ್ಮನಿರಿ. ಚುನಾವಣೆಯವರೆಗೆ ಅದಾನಿ ಅವರ ಬಗ್ಗೆ ಯಾವುದೇ ಪ್ರಶ್ನೆ ಕೇಳಬೇಡಿ ಎಂದು ನನಗೆ ಸಂದೇಶ ಕಳುಹಿಸಲಾಗಿದೆ. ನೀವು ಅದಾನಿಯವರ ಮೇಲೆ ದಾಳಿ ಮಾಡಲು ಬಯಸಿದರೆ, ಅದನ್ನು ಸ್ವಲ್ಪಮಟ್ಟಿಗೆ ಮಾಡಿ. ಆದರೆ ಪ್ರಧಾನಿ ಹೆಸರನ್ನು ಲಿಂಕ್ ಮಾಡಬೇಡಿ ಎಂದು ತಮಗೆ ಕೇಳಿಕೊಂಡಿರುವುದಾಗಿ ಮಹುವಾ ಹೇಳಿದ್ದಾರೆ.

ಸಹಿ ಮಾಡಿದ ಅಫಿಡವಿಟ್‌ನಲ್ಲಿ, ಹಿರಾನಂದಾನಿ ಅವರು ಲೋಕಸಭೆಯಲ್ಲಿ ಪ್ರಶ್ನೆ ಕೇಳುವುದಕ್ಕೆ ಟಿಎಂಸಿ ಸಂಸದೆಗೆ ಲಂಚ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಪ್ರಶ್ನೆಗಳನ್ನು ಪೋಸ್ಟ್ ಮಾಡಲು ಮಹುವಾ ಅವರ ಲೋಕಸಭಾ ಖಾತೆಯ ಲಾಗಿನ್ ಐಡಿ ಬಳಸಿರುವುದಾಗಿ ಹೇಳಿದ್ದಾರೆ.

SCROLL FOR NEXT