ಸಾಂದರ್ಭಿಕ ಚಿತ್ರ 
ದೇಶ

ಗ್ರಹಚಾರ: ಡೋರ್ ಓಪನ್ ಆಯ್ತು, ಆದ್ರೆ ಲಿಫ್ಟ್ ಬರ್ಲಿಲ್ಲ; 4 ಮಹಡಿ ಕೆಳಗೆ ಬಿದ್ದು ವ್ಯಕ್ತಿ ಸಾವು!

4ನೇ ಮಹಡಿಯಿಂದ ಕೆಳಗಿಳಿಯಲು ಹೋದ ವ್ಯಕ್ತಿ ಲಿಫ್ಟ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಂಚಿಯ ಶೈಲೇಶ್ ಕುಮಾರ್ ಮೃತ ವ್ಯಕ್ತಿ.

ರಾಂಚಿ: 4ನೇ ಮಹಡಿಯಿಂದ ಕೆಳಗಿಳಿಯಲು ಹೋದ ವ್ಯಕ್ತಿ ಲಿಫ್ಟ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಂಚಿಯ ಶೈಲೇಶ್ ಕುಮಾರ್ ಮೃತ ವ್ಯಕ್ತಿ.

ಶೈಲೇಶ್ ಕುಮಾರ್, 4ನೇ ಮಹಡಿಯಲ್ಲಿ ನಿಂತು ಲಿಫ್ಟ್ ಗುಂಡಿ ಒತ್ತಿದ್ದಾರೆ, ಈ ವೇಳೆ ಲಿಫ್ಟ್ ಬಾಗಿಲು ತೆಗೆದಿದೆ, ಆದರೆ ಲಿಫ್ಟ್ ಮಾತ್ರ ಕೆಳಗೆ ಬರಲಿಲ್ಲ, ಇದನ್ನು ಗಮನಿಸದ ಶೈಲೇಶ್ ಕಾಲಿಟ್ಟಿದ್ದಾರೆ. ಇದರಿಂದ 4ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಶೈಲೇಶ್ ಶುಕ್ರವಾರ ನೆಲಮಹಡಿಗೆ ಬರಲು ನಾಲ್ಕನೇ ಮಹಡಿಯಲ್ಲಿದ್ದ ಲಿಫ್ಟ್ ಬಟನ್ ಒತ್ತಿದರು, ನಂತರ ತಕ್ಷಣ ಲಿಫ್ಟ್ ಬಾಗಿಲು ತೆರೆದುಕೊಂಡಿತು. ಆದರೆ ಲಿಫ್ಟ್  ಬರಲಿಲ್ಲ, ಶೈಲೇಶ್ ಎಲಿವೇಟರ್ ಡಕ್ಟ್  ಪ್ರವೇಶಿಸಿದರು , ಈ ವೇಳೆ ಶಾಫ್ಟ್ ನಿಂದ ನೆಲಕ್ಕೆ ಬಿದ್ದಿದ್ದಾರೆ ಎಂದು ರಾಂಚಿ ಎಸ್ ಪಿ ತಿಳಿಸಿದ್ದಾರೆ.

ಜೋರಾದ ಶಬ್ದ ಕೇಳಿದ ಕೂಡಲೇ ಕಟ್ಟಡದ ಭದ್ರತಾ ಸಿಬ್ಬಂದಿ ಓಡಿ ಬಂದಿದ್ದಾರೆ. ಆದರೆ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ. ಅಂದಿನಿಂದ ಲಿಫ್ಟ್  ಮುಚ್ಚಲಾಗಿದೆ ಎಂದು  ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ. ಈ ಸಂಬಂಧ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಳ್ಳಾರಿ ಫೈರಿಂಗ್: ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ಪರಿಹಾರ

ಆಗ Navy Seal.. ಈಗ ಡೆಲ್ಟಾ ಫೋರ್ಸ್: Venezuela ಅಧ್ಯಕ್ಷರ ಹೆಡೆಮುರಿ ಕಟ್ಟಿದ ಅಮೆರಿಕದ ಸೀಕ್ರೆಟ್ ಸೇನೆ! Video

'ಕಾಲಿಗೆ ಪೆಟ್ಟಾಗಿದೆ.. ಪ್ಲೀಸ್ ಚಿಕಿತ್ಸೆ ಕೊಡಿ': ಆಸ್ಪತ್ರೆಗೆ ಬಂದು ಚಿಕಿತ್ಸೆ ಕೇಳಿ ಪಡೆದ ಬೀದಿ ನಾಯಿ, Video Viral

ಅಂಬಾ ದೇವಿಯ ದರ್ಶನ ಆಗಿದ್ದು ನನ್ನ ಪುಣ್ಯ: ಸಿಎಂ ಸಿದ್ದರಾಮಯ್ಯ

ಹಾವೇರಿ: ಸುಂಟರಗಾಳಿಗೆ ಕುಸಿದ ಬೃಹತ್ ಪೆಂಡಾಲ್‌; ಸತೀಶ್ ಜಾರಕಿಹೊಳಿ ಸ್ವಲ್ಪದರಲ್ಲೇ ಪಾರು! Video

SCROLL FOR NEXT