ಸಿಂಗುರ್ ನಷ್ಟ: ಟಾಟಾ ಮೋಟಾರ್ಸ್ ಗೆ ಪಶ್ಚಿಮ ಬಂಗಾಳದಿಂದ 766 ಕೋಟಿ ರೂಪಾಯಿ ಪರಿಹಾರ
ಪಶ್ಚಿಮ ಬಂಗಾಳದ ಸಿಂಗುರ್ ಉತ್ಪಾದನಾ ಘಟಕದಲ್ಲಿ ಉಂಟಾದ ನಷ್ಟಕ್ಕೆ ಟಾಟಾ ಸಂಸ್ಥೆಗೆ 766 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಮಧ್ಯಸ್ಥಿಕೆ ನ್ಯಾಯಮಂಡಳಿ ಸೂಚನೆ ನೀಡಿದೆ.
ಕೋಲ್ಕತ್ತ: ಪಶ್ಚಿಮ ಬಂಗಾಳದ ಸಿಂಗುರ್ ಉತ್ಪಾದನಾ ಘಟಕದಲ್ಲಿ ಉಂಟಾದ ನಷ್ಟಕ್ಕೆ ಟಾಟಾ ಸಂಸ್ಥೆಗೆ 766 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಮಧ್ಯಸ್ಥಿಕೆ ನ್ಯಾಯಮಂಡಳಿ ಸೂಚನೆ ನೀಡಿದೆ.
ಭೂ ವಿವಾದದ ಪರಿಣಾಮದಿಂದಾಗಿ ಟಾಟಾ ಮೋಟಾರ್ಸ್ ನ್ಯಾನೋ ಕಾರು ಉತ್ಪಾದನಾ ಘಟಕವನ್ನು ಪಶ್ಚಿಮ ಬಂಗಾಳದ ಸಿಂಗುರ್ ನಿಂದ ಗುಜರಾತ್ ನ ಸನಂದ್ ಗೆ 2008 ರ ಅಕ್ಟೋಬರ್ ನಲ್ಲಿ ವರ್ಗಾವಣೆ ಮಾಡಬೇಕಾಯಿತು. ಆದರೆ ಆ ವೇಳೆಗೆ ಟಾಟಾ ಸಂಸ್ಥೆ ಸಿಂಗುರ್ ನಲ್ಲಿ 1,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿತ್ತು.
ತ್ರಿಸದಸ್ಯ ಮದ್ಯಸ್ಥಿಕೆ ನ್ಯಾಯಮಂಡಳಿ, ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ಮಂಡಳಿ ನಿಯಮಿತ (ಡಬ್ಲ್ಯುಬಿಐಡಿಸಿ)ಯಿಂದ ರೂಪಾಯಿ 765.78 ಕೋಟಿ ರೂಪಾಯಿಯ ಜೊತೆಗೆ ಸೆ.1, 2016ಯಿಂದ ಹಣ ಪಾವತಿಯಾಗುವವರೆಗೂ ಶೇ.11 ರಷ್ಟು ವಾರ್ಷಿಕ ಬಡ್ಡಿ ಸಹಿತ ಪರಿಹಾರದ ಮೊತ್ತ ನೀಡಬೇಕೆಂದು ನ್ಯಾಯಮಂಡಳಿ ತೀರ್ಪು ನೀಡಿದೆ.
ಇದಷ್ಟೇ ಅಲ್ಲದೇ ಕಾನೂನು ಪ್ರಕ್ರಿಯೆಗಳ ವೆಚ್ಚದೆಡೆಗೆ ಟಾಟಾ ಮೋಟಾರ್ಸ್ ಪ್ರತಿವಾದಿಯಿಂದ (ಡಬ್ಲ್ಯುಬಿಐಡಿಸಿ) 1 ಕೋಟಿ ರೂ.ಗಳನ್ನು ಪ್ರಕ್ರಿಯೆಗಳ ವೆಚ್ಚಕ್ಕೆ ಮರುಪಡೆಯಲು ಅರ್ಹವಾಗಿದೆ ಎಂದು ನ್ಯಾಯಮಂಡಳಿ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.