ಅರವಿಂದ ಕೇಜ್ರಿವಾಲ್ 
ದೇಶ

ಹರಿಯಾಣದ ಜನ ಶೀಘ್ರದಲ್ಲೇ ಎಎಪಿ ಉಚಿತ ಯೋಜನೆಗಳ ಲಾಭ ಪಡೆಯುತ್ತಾರೆ: ಖಟ್ಟರ್‌ಗೆ ಅರವಿಂದ ಕೇಜ್ರಿವಾಲ್ ತಿರುಗೇಟು

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹರಿಯಾಣದ ಮುಖ್ಯಮಂತ್ರಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ 'ಉಚಿತ' ಯೋಜನೆಗಳ ಕುರಿತ ಟೀಕೆಗಳಿಗೆ ಭಾನುವಾರ ಪ್ರತಿಕ್ರಿಯಿಸಿದ್ದಾರೆ. 2024ರಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡಿದ ಸಿಎಂ ಕೇಜ್ರಿವಾಲ್, ಹರಿಯಾಣ ರಾಜ್ಯದ ಜನರಿಗೆ ಶೀಘ್ರವೇ ಉಚಿತ ಯೋಜನೆಗಳ ಲಾಭ ಸಿಗಲಿದೆ ಎಂದು ಹೇಳಿದ 

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹರಿಯಾಣದ ಮುಖ್ಯಮಂತ್ರಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ 'ಉಚಿತ' ಯೋಜನೆಗಳ ಕುರಿತ ಟೀಕೆಗಳಿಗೆ ಭಾನುವಾರ ಪ್ರತಿಕ್ರಿಯಿಸಿದ್ದಾರೆ.

2024ರಲ್ಲಿ ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡಿದ ಸಿಎಂ ಕೇಜ್ರಿವಾಲ್, ಹರಿಯಾಣ ರಾಜ್ಯದ ಜನರಿಗೆ ಶೀಘ್ರವೇ ಉಚಿತ ಯೋಜನೆಗಳ ಲಾಭ ಸಿಗಲಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಖಟ್ಟರ್ ಸಾಬ್! ನಾವು ದೆಹಲಿಯಲ್ಲಿ ಉಚಿತವಾಗಿ ವಿಶ್ವ ದರ್ಜೆಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದೇವೆ. ನಾವು ದಿನವಿಡೀ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸುತ್ತೇವೆ. ನಾವು ಈ ಸೌಲಭ್ಯಗಳನ್ನು ಪಂಜಾಬ್‌ನಲ್ಲಿಯೂ ಸಹ ಪ್ರಾರಂಭಿಸಿದ್ದೇವೆ ಮತ್ತು ನಮ್ಮ ಈ ಯೋಜನೆಗಳಿಂದ ಸಾರ್ವಜನಿಕರು ಸಂತೋಷವಾಗಿದ್ದಾರೆ. ಶೀಘ್ರದಲ್ಲೇ, ಹರಿಯಾಣದ ಜನರು ಸಹ ಉಚಿತ ಯೋಜನೆಗಳ ಪ್ರಯೋಜನ ಪಡೆಯುತ್ತಾರೆ' ಎಂದಿದ್ದಾರೆ.

ಇದಕ್ಕೂ ಮುನ್ನ ಶನಿವಾರ ಹರಿಯಾಣದ ಸಿಎಂ ಖಟ್ಟರ್ ಅವರು ಸಿಎಂ ಪರಿವಾರ ಅಂತ್ಯೋದಯ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದು, ಯಾವಾಗಲೂ ‘ಇದನ್ನು ಉಚಿತವಾಗಿ ಪಡೆಯಿರಿ, ಅದನ್ನು ಉಚಿತವಾಗಿ ಪಡೆಯಿರಿ’ ಎಂಬ ಘೋಷಣೆ ಕೂಗುವ ಪಕ್ಷಗಳಿವೆ ಎಂದು ಆಮ್ ಆದ್ಮಿ ಪಕ್ಷವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು.

'ಇದನ್ನು ಉಚಿತವಾಗಿ ಪಡೆಯಿರಿ, ಅದನ್ನು ಉಚಿತವಾಗಿ ಪಡೆಯಿರಿ' ಎಂಬ ಘೋಷಣೆಗಳನ್ನು ಎತ್ತುವ ಅನೇಕ ಪಕ್ಷಗಳಿವೆ... ಉಚಿತಗಳ ಅಭ್ಯಾಸವನ್ನು ಬೆಳೆಸುವ ಬದಲು, ದುಡಿಯುವ ವ್ಯಕ್ತಿಯ ಅಗತ್ಯಗಳನ್ನು ಪೂರೈಸುವುದು, ಅವನ ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ಅವನನ್ನು ಅಭಿವೃದ್ಧಿಪಡಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ' ಎಂದು ಸಿಎಂ ಖಟ್ಟರ್ ಹೇಳಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಬಿಜೆಪಿಯು ಆಮ್ ಆದ್ಮಿ ಪಕ್ಷವು 'ಉಚಿತ'ಗಳನ್ನು ಆಶ್ರಯಿಸಿದೆ ಎಂದು ಆರೋಪಿಸಿತು ಮತ್ತು ನಂತರ 'ರೇವ್ಡಿ ರಾಜಕೀಯ', (ಉಚಿತ ರಾಜಕೀಯ) ದಲ್ಲಿ ತೊಡಗಿದೆ ಎಂದು ದೂರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT