ದೇಶ

ಇಂಡಿಯಾ ಅಥವಾ ಭಾರತ; ನಮ್ಮ ದೇಶವನ್ನು ಏನೆಂದು ಉಲ್ಲೇಖಿಸಬೇಕು?: 2016 ರಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನೆಂದರೆ...

Srinivas Rao BV

ನವದೆಹಲಿ: ರಾಷ್ಟ್ರಪತಿಗಳ ಕಚೇರಿಯಿಂದ ಜಿ20 ಪ್ರತಿನಿಧಿಗಳಿಗೆ ಕಳುಹಿಸಲಾದ ಔತಣಕೂಟದ ಆಮಂತ್ರಣದಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಉಲ್ಲೇಖಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ನಮ್ಮ ದೇಶಕ್ಕೆ ಈ ಎರಡರಲ್ಲಿ ಯಾವ ಹೆಸರು ಸರಿ ಎಂಬ ಚರ್ಚೆ ಮುಂದುವರೆದಿದೆ.

ಈ ಸಂಬಂಧ 2016  ರಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯ ಗಮನಾರ್ಹವಾದದ್ದು. ಎಲ್ಲಾ ಉದ್ದೇಶಗಳಿಗೂ ಇಂಡಿಯಾವನ್ನು ಭಾರತ ಎಂದು ಉಲ್ಲೇಖಿಸಬೇಕೆಂದು ನಿರ್ದೇಶನ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ್ದ ಕೋರ್ಟ್ ದೇಶದ ಜನರು ಅವರ ಇಚ್ಛೆಗೆ ತಕ್ಕಂತೆ ಇಂಡಿಯಾ ಅಥವಾ ಭಾರತ ಎರಡನ್ನೂ ಉಲ್ಲೇಖಿಸಬಹುದು ಎಂದು ಹೇಳಿತ್ತು.

 ರಾಷ್ಟ್ರಪತಿಗಳ ಕಚೇರಿಯಿಂದ ಜಿ20 ಪ್ರತಿನಿಧಿಗಳಿಗೆ ಕಳುಹಿಸಲಾದ ಔತಣಕೂಟದ ಆಮಂತ್ರಣದಲ್ಲಿ ದ್ರೌಪದಿ ಮುರ್ಮು ಅವರನ್ನು 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಕರೆಯಲಾಗಿದೆ.

ಭಾರತ ಅಥವಾ ಇಂಡಿಯಾ? ನಿಮಗೆ ಭಾರತ ಎಂದು ಕರೆಯಬೇಕೆನಿಸಿದರೆ ಹಾಗೆಯೇ ಮಾಡಿ, ಇನ್ನೂ ಕೆಲವರು ಇಂಡಿಯಾ ಎನ್ನುತ್ತಾರೆ ಅವರು ಹಾಗೆಯೇ ಉಲ್ಲೇಖಿಸಲಿ ಎಂದು ನ್ಯಾ. ಟಿಎಸ್ ಠಾಕೂರ್ ಹಾಗೂ ಯುಯು ಲಲಿತ್ ಅವರಿದ್ದ ಪೀಠ ಹೇಳಿ, ಮಹಾರಾಷ್ಟ್ರದ ನಿರಂಜನ್ ಭಟ್ವಾಲ್ ಅವರ ಅರ್ಜಿಯನ್ನು ವಿಲೇವಾರಿ ಮಾಡಿತ್ತು.

SCROLL FOR NEXT