ದೇಶ

ಸಚಿವ ಅರ್ಜುನ್ ರಾಮ್ ಮೇಘವಾಲ್ ವಿರುದ್ಧ ಹೇಳಿಕೆ: ಬಿಜೆಪಿಯಿಂದ ಕೈಲಾಶ್ ಮೇಘವಾಲ್ ಅಮಾನತು

Lingaraj Badiger

ಜೈಪುರ: ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಕೈಲಾಶ್ ಮೇಘವಾಲ್ ಅವರನ್ನು ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ ಪಿ ಜೋಶಿ ಅವರು, ಶಹಾಪುರ ಶಾಸಕ ಹಾಗೂ ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಆಗಿರುವ ಕೈಲಾಶ್ ಮೇಘವಾಲ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ ನಂತರ ಬಿಜೆಪಿ ಈ ಕ್ರಮ ಕೈಗೊಂಡಿದೆ.

"ಪಕ್ಷದ ಅಧ್ಯಕ್ಷರು ಕೈಲಾಶ್ ಮೇಘವಾಲ್ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದ್ದಾರೆ ಮತ್ತು ಮುಂದಿನ ಕ್ರಮಕ್ಕಾಗಿ(ರಾಜ್ಯ ಮಟ್ಟದ) ಶಿಸ್ತು ಸಮಿತಿಗೆ ಉಲ್ಲೇಖಿಸಲಾಗಿದೆ" ಎಂದು ಶಿಸ್ತು ಸಮಿತಿ ಅಧ್ಯಕ್ಷ ಓಂಕಾರ್ ಸಿಂಗ್ ಲಖಾವತ್ ಅವರು ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಸೆಣಸಲು ಕೇಸರಿ ಪಕ್ಷ ಸಜ್ಜಾಗುತ್ತಿರುವಾಗಲೇ ಪಕ್ಷದಲ್ಲಿ ಮೇಘವಾಲ್ ವರ್ಸಸ್ ಮೇಘವಾಲ್ ಎಂಬ ಜಟಾಪಟಿ ಏರ್ಪಟ್ಟಿದೆ.

ಸ್ವಪಕ್ಷದ ಕೇಂದ್ರ ಸಚಿವರನ್ನು "ನಂಬರ್ ಒನ್ ಭ್ರಷ್ಟ" ಎಂದು ಕರೆದ ಒಂದು ದಿನದ ನಂತರ ಬಿಜೆಪಿ ಶಾಸಕ ಕೈಲಾಶ್ ಮೇಘವಾಲ್ ಗೆ ನೋಟಿಸ್ ನೀಡಲಾಗಿದೆ.

SCROLL FOR NEXT