ಸಾಂದರ್ಭಿಕ ಚಿತ್ರ 
ದೇಶ

ಎನ್‌ಐಟಿ-ಸಿಲ್ಚಾರ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ; ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, 40 ಮಂದಿಗೆ ಗಾಯ

ಎನ್‌ಐಟಿ-ಸಿಲ್ಚಾರ್‌ನ ಮೂರನೇ ವರ್ಷದ ವಿದ್ಯಾರ್ಥಿಯೊಬ್ಬರು ಶುಕ್ರವಾರ ಸಂಜೆ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುವಾಹಟಿ: ಎನ್‌ಐಟಿ-ಸಿಲ್ಚಾರ್‌ನ ಮೂರನೇ ವರ್ಷದ ವಿದ್ಯಾರ್ಥಿಯೊಬ್ಬರು ಶುಕ್ರವಾರ ಸಂಜೆ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅರುಣಾಚಲ ಪ್ರದೇಶ ಮೂಲದ ವಿದ್ಯಾರ್ಥಿಯ ಮೃತದೇಹ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನೆಯ ನಂತರ, ಕಾಲೇಜು ಅಧಿಕಾರಿಗಳ ಕ್ರಮದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಆತನ ಸಹಪಾಠಿಗಳು, ಪೊಲೀಸರು ಶವ ಕೆಳಗಿಳಿಸದಂತೆ ತಡೆದರು.

ಸುಮಾರು ಎರಡು ಗಂಟೆಗಳ ನಂತರ, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವಲ್ಲಿ ಯಶಸ್ವಿಯಾಗುತ್ತಿದ್ದಂತೆ, ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿರುವ ಡೀನ್ ಆಫ್ ಅಕಾಡೆಮಿಕ್ಸ್ ಬಿಕೆ ರಾಯ್ ಅವರ ಅಧಿಕೃತ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು.

2021 ರಲ್ಲಿ ಕೋವಿಡ್ ನಿಂದಾಗಿ ಆನ್‌ಲೈನ್‌ನಲ್ಲಿ ನಡೆದ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಆರು ವಿಷಯಗಳನ್ನು ಉಳಿಸಿಕೊಂಡಿದ್ದ ಮೃತ ವಿದ್ಯಾರ್ಥಿಯನ್ನು ರಾಯ್ ಅವಮಾನಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ, ಮೃತ ವಿದ್ಯಾರ್ಥಿ ಮನೆಯಲ್ಲಿದ್ದರು ಮತ್ತು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ವಿಫಲರಾಗಿದ್ದರು. ಇಂಟರ್‌ನೆಟ್ ಸಂಪರ್ಕದ ಕೊರತೆಯಿಂದಾಗಿ ಈ ಹಿನ್ನಡೆಯಾಗಿದೆ ಎಂದು ಅವರು ಹೇಳಿದ್ದಾರೆ.

ಬಾಕಿ ಉಳಿದ ವಿಷಯಗಳನ್ನು ತೇರ್ಗಡೆಯಾಗಲು ವಿಶೇಷ ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿ ಮನವಿ ಮಾಡಿದ್ದರು. ಇದರಿಂದ ಕೋಪಗೊಂಡ ರಾಯ್ ಅವರನ್ನು ಅವಮಾನಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ಘಟನೆಯ ನಂತರ, ನೊಂದ ವಿದ್ಯಾರ್ಥಿ ತನ್ನ ಕೋಣೆಗೆ ತೆರಳಿ ಬೀಗ ಹಾಕಿಕೊಂಡು ಆತ್ಮಹತ್ಯೆಗೆ ಶಣರಾಗಿದ್ದಾರೆ ಎಂದು ಆರೋಪಿಗಳು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ವಿದ್ಯಾರ್ಥಿಗಳು ರಾಯ್ ಅವರ ನಿವಾಸವನ್ನು ಧ್ವಂಸಗೊಳಿಸಿದ್ದಾರೆ ಎಂದು ಕ್ಯಾಚಾರ್‌ ಪೊಲೀಸ್ ಅಧೀಕ್ಷಕ ನುಮಲ್ ಮಹತ್ತಾ ಅವರು ತಿಳಿಸಿದ್ದಾರೆ. 

ಆಕ್ರೋಶಗೊಂಡ ವಿದ್ಯಾರ್ಥಿಗಳು ಪೊಲೀಸರು ಮತ್ತು ಇತರ ಅಧಿಕಾರಿಗಳ ಮೇಲೂ ಹಲ್ಲೆ ನಡೆಸಿದರು. ಒಂದು ಹಂತದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಬೇಕಾಯಿತು. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ’’ ಎಂದು ಅವರು ಹೇಳಿದ್ದಾರೆ. 

ಲಾಠಿ ಚಾರ್ಜ್‌ನಲ್ಲಿ 40 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ(SMCH) ದಾಖಲಿಸಲಾಗಿದೆ.

ಕೆಲ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Nepal Violence: FB, Tiktok, Instagram ನಿಷೇಧದ ವಿರುದ್ಧ ಆಕ್ರೋಶ; ಸಂಸತ್ ಭವನಕ್ಕೆ ಬೆಂಕಿ; 9 ಮಂದಿ ಸಾವು, Video!

ಬಿಜೆಪಿಯವರು ಪ್ರಚೋದನೆ ಮಾಡುವುದರಲ್ಲಿ ನಿಸ್ಸೀಮರು, ಮದ್ದೂರು ಘಟನೆ ಬಗ್ಗೆ ವರದಿ ಬಂದ ಮೇಲೆ ಕ್ರಮ: ಸಿದ್ದರಾಮಯ್ಯ

ಮತ್ತೆ ಅಬ್ಬರಿಸಲಿದ್ದಾನೆ ಮಳೆರಾಯ: 3 ದಿನ ರಾಜ್ಯಾದ್ಯಂತ ವರ್ಷಧಾರೆ, ಯೆಲ್ಲೋ ಅಲರ್ಟ್ ಘೋಷಣೆ

'ಪ್ರಧಾನಿ ಮೋದಿ ನೋಡಿ ಕಲಿಯಿರಿ...': Netanyahu ಗೆ ಇಸ್ರೇಲಿ ರಕ್ಷಣಾ ನೀತಿ ತಜ್ಞರ ಚಾಟಿ!

'Waste of Humanity': ಉಕ್ರೇನ್ ಮೇಲೆ ರಷ್ಯಾದ ಅತಿದೊಡ್ಡ ವೈಮಾನಿಕ ದಾಳಿಗೆ ಟ್ರಂಪ್ ಆಕ್ರೋಶ!

SCROLL FOR NEXT