ದೇಶ

ಮಹಿಳಾ ಮೀಸಲಾತಿ ಮಸೂದೆ: ನಿಬಂಧನೆಗಳನ್ನು ಕೈಬಿಟ್ಟು, ಕ್ಷಿಪ್ರ ಅನುಷ್ಠಾನಕ್ಕೆ ಮಾಯಾವತಿ ಆಗ್ರಹ

Lingaraj Badiger

ಲಖನೌ: ಮಹಿಳಾ ಮೀಸಲಾತಿ ಮಸೂದೆಯನ್ನು ಜನಗಣತಿ ಮತ್ತು ಡಿಲಿಮಿಟೇಶನ್ ನಿಂದ ಬೇರ್ಪಡಿಸಿ, "ತಕ್ಷಣ" ಜಾರಿಗೊಳಿಸಬೇಕು ಎಂದು ಬಿಎಸ್ಪಿ ನಾಯಕಿ ಮಾಯಾವತಿ ಅವರು ಬುಧವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮುಂದಿನ 15 ಅಥವಾ 16 ವರ್ಷಗಳವರೆಗೆ ಅಥವಾ "ಹಲವು ಚುನಾವಣೆಗಳವರೆಗೆ" ಮೀಸಲಾತಿಯ ಪ್ರಯೋಜನ ಮಹಿಳೆಯರಿಗೆ ತಲುಪದ ರೀತಿಯಲ್ಲಿ ಮಸೂದೆಯಲ್ಲಿ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದೆ ಎಂದು ಬಿಎಸ್ಪಿ ನಾಯಕಿ ಹೇಳಿದ್ದಾರೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿದ್ದು, ಪಕ್ಷಗಳ ನಡುವೆ ಒಮ್ಮತದ ಕೊರತೆಯಿಂದಾಗಿ ಸುಮಾರು ಮೂರು ದಶಕಗಳಿಂದ ಬಾಕಿ ಉಳಿದಿರುವ ಮಸೂದೆಗೆ ಮರು ಜೀವ ನೀಡಲಾಗಿದೆ.

"ಈ ಮಸೂದೆ ಅಂಗೀಕಾರವಾದ ನಂತರ ದೇಶದಲ್ಲಿ ಜನಗಣತಿ ಕೈಗೊಳ್ಳಲಾಗುವುದು ಮತ್ತು ನಂತರ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಕ್ಷೇತ್ರಗಳ ವಿಂಗಡಣೆ ಕೈಗೊಳ್ಳಲಾಗುವುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ". ಇದರರ್ಥ ಇದನ್ನು ತಕ್ಷಣವೇ ಕಾರ್ಯಗತಗೊಳಿಸಲಾಗುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ವರಿಷ್ಠೆ ಹೇಳಿದ್ದಾರೆ.

SCROLL FOR NEXT