ಸಾಂದರ್ಭಿಕ ಚಿತ್ರ 
ದೇಶ

ಇಂದು 'ಜಿ20 ಟೀಂ' ಜೊತೆಗೆ ಪ್ರಧಾನಿ ಮೋದಿ ಸಂವಾದ, ಭೋಜನ!

ಜಿ20 ಶೃಂಗಸಭೆ ಯಶಸ್ವಿಯಾಗುವಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಿದ್ದ ಜಿ20 ಟೀಂ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭಾರತ್ ಮಂಟಪದಲ್ಲಿ ಸಂವಾದ ನಡೆಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

ನವದೆಹಲಿ: ಜಿ20 ಶೃಂಗಸಭೆ ಯಶಸ್ವಿಯಾಗುವಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಿದ್ದ ಜಿ20 ಟೀಂ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭಾರತ್ ಮಂಟಪದಲ್ಲಿ ಸಂವಾದ ನಡೆಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಸಂವಾದದ ನಂತರ ಭೋಜನ ಸವಿಯಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಜಿ20 ಶೃಂಗಸಭೆಯ ಯಶಸ್ಸಿಗೆ ಕೊಡುಗೆ ನೀಡಿದ ಸುಮಾರು 3,000 ಜನರು ಸಂವಾದದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.  

ಇದು ವಿಶೇಷವಾಗಿ ಶೃಂಗಸಭೆಯನ್ನು ಸುಗಮವಾಗಿ ನಡೆಸಲು ನೆಲಮಟ್ಟದಲ್ಲಿ ಕೆಲಸ ಮಾಡಿದವರನ್ನು ಒಳಗೊಂಡಿರುತ್ತದೆ. ಇವರಲ್ಲಿ ಕ್ಲೀನರ್‌ಗಳು, ಚಾಲಕರು, ವೇಟರ್‌ಗಳು ಮತ್ತು ವಿವಿಧ ಸಚಿವಾಲಯಗಳ ಇತರ ಸಿಬ್ಬಂದಿಗಳು ಸೇರಿದ್ದಾರೆ. ಸಂವಾದದಲ್ಲಿ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿಡಿ: ತಮಿಳುನಾಡು CM Vijay ಭೇಟಿಗೆ ಬ್ರೇಕ್ ಹಾಕಿದ ಡಿಕೆಶಿ! "ಎಲ್ಲ ಅಂಕಿ-ಅಂಶ ನ್ಯಾಯಾಲಯದಲ್ಲಿದೆ, ಮೇಲ್ಮನವಿ ಸಲ್ಲಿಸಿದ್ದೇವೆ" ಎಂದ ಸಿಎಂ

ಕಾವೇರಿ ಹೋರಾಟ: 'ಕೈ ಮುಗಿದು ಕೇಳುತ್ತೇನೆ.. ಬಂದ್ ಬೇಡ, ರಾಜ್ಯದ ಹಿತ ಕಾಪಾಡಲು ಎಲ್ಲ ಕಾನೂನು ಹೋರಾಟ ನಡೆಸಿದ್ದೇವೆ': CM ಡಿಕೆ ಶಿವಕುಮಾರ್ ಮನವಿ

ದೇಶದ ಅರ್ಧದಷ್ಟು ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್; ನಂಬರ್ ಒನ್ ಯಾರು? ಡಿಕೆಶಿ ಮೇಲೆ ಇರುವ ಪ್ರಕರಣಗಳೇಷ್ಟು?

ಕಾವೇರಿ ಕಿಚ್ಚು: KRSಗೆ ಬಿಜೆಪಿ ಮುತ್ತಿಗೆ ಯತ್ನ, ವಿಜಯೇಂದ್ರ, ಆರ್. ಅಶೋಕ್ ಸೇರಿ ಹಲವು ನಾಯಕರು ವಶಕ್ಕೆ!

ಕಾವೇರಿ ಜಲ ವಿವಾದ: ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್; ವಾಟಾಳ್ ನಾಗರಾಜ್ ಘೋಷಣೆ