ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರೈಲು ಅಪಘಾತಗಳ ಪರಿಹಾರ ಮೊತ್ತ 10 ಪಟ್ಟು ಹೆಚ್ಚಳ

ರೈಲು ಅಪಘಾತಗಳಲ್ಲಿ ಯಾರಾದರೂ ಮೃತಪಟ್ಟರೆ ಅಥವಾ ಗಾಯಗೊಂಡರೆ ನೀಡುವ ಪರಿಹಾರದ ಮೊತ್ತವನ್ನು ರೈಲ್ವೆ ಮಂಡಳಿ 10 ಪಟ್ಟು ಹೆಚ್ಚಿಸಿದೆ.

ಸಾಂದರ್ಭಿಕ ಚಿತ್ರ
Lingaraj Badiger
Updated On : 21 Sept 2023, 5:13 pm

ನವದೆಹಲಿ: ರೈಲು ಅಪಘಾತಗಳಲ್ಲಿ ಯಾರಾದರೂ ಮೃತಪಟ್ಟರೆ ಅಥವಾ ಗಾಯಗೊಂಡರೆ ನೀಡುವ ಪರಿಹಾರದ ಮೊತ್ತವನ್ನು ರೈಲ್ವೆ ಮಂಡಳಿ 10 ಪಟ್ಟು ಹೆಚ್ಚಿಸಿದೆ.

ರೈಲು ಅಪಘಾತಗಳ ಪರಿಹಾರವನ್ನು 2012 ಮತ್ತು 2013 ರಲ್ಲಿ ಕೊನೆಯದಾಗಿ ಪರಿಷ್ಕರಿಸಲಾಗಿತ್ತು.

"ರೈಲು ಅಪಘಾತಗಳು ಮತ್ತು ಅಹಿತಕರ ಘಟನೆಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮತ್ತು ಗಾಯಗೊಂಡ ಪ್ರಯಾಣಿಕರಿಗೆ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ" ಎಂದು ಸೆಪ್ಟೆಂಬರ್ 18 ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement

Advertisement

ಇದನ್ನು ಓದಿ: ಅಪಘಾತ ತಡೆಯಲು ರೈಲುಗಳಲ್ಲಿ AI ಚಾಲಿತ ಸುರಕ್ಷತಾ ಸಾಧನ 'ಬ್ಲಿಂಕ್ ಡಿಟೆಕ್ಟಿಂಗ್' ಅಳವಡಿಕೆ​

"ಮಾನವಸಹಿತ ಲೆವೆಲ್ ಕ್ರಾಸಿಂಗ್ ಗೇಟ್ ಅಪಘಾತದಲ್ಲಿ ರೈಲ್ವೆಯ ಪ್ರಾಥಮಿಕ ಹೊಣೆಗಾರಿಕೆಯಿಂದಾಗಿ ಅಪಘಾತಕ್ಕೀಡಾದ ರಸ್ತೆ ಬಳಕೆದಾರರಿಗೆ" ನೀಡುವ ಪರಿಹಾರವನ್ನು ಸಹ ಹೆಚ್ಚಿಸಲಾಗಿದೆ ಮತ್ತು ಇದು ಸೆಪ್ಟೆಂಬರ್ 18 ರಿಂದ ಅನ್ವಯಿಸುತ್ತದೆ ಸುತ್ತೋಲೆ ತಿಳಿಸಿದೆ.

ಸುತ್ತೋಲೆಯ ಪ್ರಕಾರ, ರೈಲು ಮತ್ತು ಮಾನವಸಹಿತ ಲೆವೆಲ್ ಕ್ರಾಸಿಂಗ್ ಅಪಘಾತಗಳಲ್ಲಿ ಮೃತ ಪ್ರಯಾಣಿಕರ ಸಂಬಂಧಿಕರಿಗೆ ನೀಡುತ್ತಿದ್ದ ಪರಿಹಾರದ ಮೊತ್ತವನ್ನು 5 ಲಕ್ಷ ರೂಪಾಯಿಗೆ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ನೀಡುತ್ತಿದ್ದ ಪರಿಹಾರವನ್ನು 2.5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿರುವ ಪ್ರಯಾಣಿಕರಿಗೆ 50,000 ರೂ. ನೀಡಲಾಗುವುದು ಎಂದು ರೈಲ್ವೆ ಮಂಡಳಿ ಹೇಳಿದೆ.

ಈ ಹಿಂದೆ ಪರಿಹಾರದ ಮೊತ್ತ ಕ್ರಮವಾಗಿ 50,000, 25,000 ಮತ್ತು 5,000 ರೂ. ಇತ್ತು.

ಇನ್ನು ಅಹಿತಕರ ಘಟನೆಗಳಲ್ಲಿ ಮೃತಪಟ್ಟ, ಗಂಭೀರವಾಗಿ ಗಾಯಗೊಂಡ ಮತ್ತು ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರ ಅವಲಂಬಿತರಿಗೆ ಕ್ರಮವಾಗಿ 1.5 ಲಕ್ಷ, 50,000 ಮತ್ತು 5,000 ರೂ.ಗಳನ್ನು ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮುಂಚೆ ಈ ಮೊತ್ತವು ಕ್ರಮವಾಗಿ 50,000, 25,000 ಮತ್ತು 5,000 ರೂ. ಇತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments