ದೇಶ

ಪ್ರಧಾನಿ ಅಭ್ಯರ್ಥಿಯಾಗಿ ಸಿಎಂ ನಿತೀಶ್ ಕುಮಾರ್ ಅವರಿಗಿಂತ ಸಮರ್ಥರು ಯಾರೂ ಇಲ್ಲ: ಮಹೇಶ್ವರ್ ಹಜಾರಿ

Ramyashree GN

ಪಾಟ್ನಾ: ಪ್ರಧಾನಿ ಅಭ್ಯರ್ಥಿಗೆ ನಿತೀಶ್ ಕುಮಾರ್ ಅವರಿಗಿಂತ ಸಮರ್ಥ ನಾಯಕ ಮತ್ತೊಬ್ಬರು ಇಲ್ಲ ಎಂದು ಬಿಹಾರ ವಿಧಾನಸಭೆಯ ಉಪಸಭಾಪತಿ ಮಹೇಶ್ವರ್ ಹಜಾರಿ ಭಾನುವಾರ ಪ್ರತಿಪಾದಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ನಾಯಕರು ಈ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದರು.

2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷದ ಸಿದ್ಧತೆಗಳ ಕುರಿತಾದ ಪ್ರಶ್ನೆಗಳಿಗೆ ಹಜಾರಿ ಪ್ರತಿಕ್ರಿಯಿಸಿದರು.
ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿಗೆ ಬೇಕಾದ ಎಲ್ಲಾ ಗುಣಗಳನ್ನು ಹೊಂದಿದ್ದಾರೆ. ಇಂಡಿಯಾ ಮೈತ್ರಿಕೂಟವು ಪ್ರಧಾನಿ ಅಭ್ಯರ್ಥಿಗೆ ಹೆಸರನ್ನು ಘೋಷಿಸಿದಾಗ ಅದು ನಿತೀಶ್ ಕುಮಾರ್ ಅವರ ಹೆಸರಾಗಿರುತ್ತದೆ' ಎಂದು ಅವರು ಭಾನುವಾರ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.

ಈ ವರ್ಷ ನಡೆದ ತಮ್ಮ ಮೂರು ಸಭೆಗಳಲ್ಲಿಯೂ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕರು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿಲ್ಲ.

‘ದೇಶದಲ್ಲಿ ರಾಮಮನೋಹರ ಲೋಹಿಯಾ ಅವರ ನಂತರ ಯಾವುದೇ ದೊಡ್ಡ ಸಮಾಜವಾದಿ ನಾಯಕರಿದ್ದರೆ ಅದು ನಿತೀಶ್ ಕುಮಾರ್ ಜೀ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಒಮ್ಮೆ ಹೇಳಿದ್ದರು ಎಂದು ಹಜಾರಿಯಾ ನೆನಪಿಸಿಕೊಂಡರು.

ನಿತೀಶ್ ಕುಮಾರ್ ಅವರು ಕೇಂದ್ರದಲ್ಲಿ ಐದು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು 18 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿತೀಶ್ ಕುಮಾರ್ ಅವರು ಪ್ರಧಾನಿ ಹುದ್ದೆಯ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ವಿರೋಧ ಪಕ್ಷಗಳನ್ನು ಪ್ರಯತ್ನಗಳನ್ನು ಮುನ್ನಡೆಸುತ್ತಾರೆ ಎಂದು ಹಲವಾರು ಬಾರಿ ಹೇಳಿದ್ದಾರೆ ಎಂದು ಜೆಡಿಯು ನಾಯಕ ಹೇಳಿದರು.

ಇಂಡಿಯಾ ಎಂಬುದು ಕಾಂಗ್ರೆಸ್ ಸೇರಿದಂತೆ 26 ವಿರೋಧ ಪಕ್ಷಗಳ ಮೈತ್ರಿಕೂಟವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಅನ್ನು ಎದುರಿಸಲು ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಮೂರನೇ ಬಾರಿಗೆ ಸತತವಾಗಿ ಗೆಲ್ಲುವುದನ್ನು ತಡೆಯಲು ವಿಪಕ್ಷಗಳು ಒಗ್ಗೂಡಿವೆ.

ವಿರೋಧ ಪಕ್ಷಗಳ ಮೊದಲ ಸಭೆಯನ್ನು ಜೂನ್ 23ರಂದು ಪಾಟ್ನಾದಲ್ಲಿ ನಡೆಸಲಾಯಿತು ಮತ್ತು ಎರಡನೇ ಸಭೆ ಜುಲೈ 17-18 ರಂದು ಬೆಂಗಳೂರಿನಲ್ಲಿ ನಡೆಯಿತು. ಮೂರನೇ ಸಭೆಯು ಮುಂಬೈನಲ್ಲಿ ಆಗಸ್ಟ್ 31-ಸೆಪ್ಟೆಂಬರ್ 1 ರಂದು ನಡೆಯಿತು.

SCROLL FOR NEXT