ದೇಶ

ಜಾರ್ಖಂಡ್: ಮಾವೋವಾದಿಗಳಿಂದ ಐಇಡಿ ಸ್ಫೋಟ, ಸಿಆರ್ ಪಿಎಫ್ ಯೋಧ ಸಾವು, ಅಧಿಕಾರಿಗೆ ಗಾಯ

Srinivas Rao BV

ರಾಂಚಿ: ಜಾರ್ಖಂಡ್ ನಲ್ಲಿ ಮಾವೋವಾದಿಗಳು ಸುಧಾರಿತ ಸ್ಫೋಟಕ ಸಾಧನದಿಂದ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಸಾವನ್ನಪ್ಪಿದ್ದಾನೆ. 

ಪಶ್ಚಿಮ ಸಿಂಗ್ಬುಮ್ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದ್ದಾಗ ಪೊದೆಯೊಂದರಲ್ಲಿ ಇಟ್ಟಿದ್ದ ಐಇಡಿಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದಾಗ ನಡೆದಿದೆ. 

ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (COBRA) ಘಟಕದ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಇಬ್ಬರನ್ನೂ ವಿಮಾನದಲ್ಲಿ ರಾಂಚಿಗೆ ಕರೆದೊಯ್ಯಲಾಗಿದೆ. ಆದರೆ ಕಾನ್‌ಸ್ಟೆಬಲ್ ರಾಜೇಶ್ ಕುಮಾರ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರು.

ಪಶ್ಚಿಮ ಸಿಂಗ್ಭೂಮ್ ನ ಎಸ್ ಪಿ ಅಶುತೋಷ್ ಶೇಖರ್, ಜಂಟಿ ಕಾರ್ಯಾಚರಣೆಯಲ್ಲಿ ತಲಾ 5 ಕೆಜಿಗಳ ಎರಡು ಐಇಡಿಗಳು, 240 ಸ್ಪೈಕ್ ಗಳು ಹಾಗೂ 31 ಸ್ಪೈಕ್ ಹೋಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ಅವುಗಳನ್ನು ಬಾಂಬ್ ನಿಷ್ಕ್ರಿಯ ದಳ ನಾಶ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಮಿಸಿರ್ ಬೆಸ್ರಾ, ಪತಿರಾಮ್ ಮಾಝಿ ಅಲಿಯಾಸ್ ಅನಲ್-ದಾ ಅಲಿಯಾಸ್ ರಮೇಶ್, ಅಜಯ್ ಮಹತೋ, ಅನ್ಮೋಲ್-ಡಾ, ಮೋಚು, ಚಮನ್, ಸಗೆನ್ ಅಂಗರಿಯಾ ಸೇರಿದಂತೆ ಮಾವೋವಾದಿಗಳ ನೇತೃತ್ವದ ಮಾವೋವಾದಿ ಸ್ಕ್ವಾಡ್‌ಗಳನ್ನು ತಟಸ್ಥಗೊಳಿಸಲು ಭದ್ರತಾ ಪಡೆಗಳೊಂದಿಗೆ ರಾಜ್ಯ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.  ಕಂಡೆ ಮತ್ತು ಅಶ್ವಿನ್, ತುಂಬಹಕ, ಸರ್ಜಂಬೂರು, ಪಟಟೋರೋಬ್ ಮತ್ತು ಅಂಜೆಡ್ಬೆರಾ ಗ್ರಾಮಗಳ ಬೆಟ್ಟಗಳು ಮತ್ತು ಕಾಡುಗಳಲ್ಲಿ ಮಾವೋವಾದಿಗಳು ಸಕ್ರಿಯರಾಗಿದ್ದಾರೆ.

ಭದ್ರತಾ ಪಡೆಗಳು ಕಾಡಿನೊಳಗೆ ಪ್ರವೇಶಿಸುವುದನ್ನು ತಡೆಯಲು ಮಾವೋವಾದಿಗಳು ಐಇಡಿಗಳನ್ನು ಹಾಕಿದ್ದಾರೆ, ಈ ಕಾರಣದಿಂದಾಗಿ ಕಾರ್ಯಾಚರಣೆಯ ಸಮಯದಲ್ಲಿ ನಿಯಮಿತವಾಗಿ ಸ್ಫೋಟಗಳು ನಡೆಯುತ್ತಿವೆ. ಜಿಲ್ಲೆಯ ಕೊಲ್ಹಾನ್ ಮೀಸಲು ಅರಣ್ಯದೊಳಗಿನ ಗುಡ್ಡಗಾಡು ಪ್ರದೇಶದಲ್ಲಿ ಕಳೆದ 10 ತಿಂಗಳಲ್ಲಿ ಮಾವೋವಾದಿ ಹಿಂಸಾಚಾರದಲ್ಲಿ ಇದು 17 ನೇ ನಾಗರಿಕ ಸಾವಾಗಿದೆ.

ಮಾವೋವಾದಿಗಳು ಕೊಲ್ಹಾನ್ ಕಾಡುಗಳ ಪಕ್ಕದ ಹಳ್ಳಿಗಳಲ್ಲಿ ಕರಪತ್ರಗಳನ್ನು ಹಂಚಿದ್ದು, ಐಇಡಿ ಮೇಲೆ ನಡೆದು ಪ್ರಾಣ ಕಳೆದುಕೊಳ್ಳಬಹುದಾದ ಕಾರಣದಿಂದ ಕಾಡಿನೊಳಗೆ ಆಳವಾಗಿ ಪ್ರವೇಶಿಸದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

SCROLL FOR NEXT