ದೇಶ

ಸಶಸ್ತ್ರ ಪಡೆಗಳಿಗೆ ಅಂಗವೈಕಲ್ಯ ಪಿಂಚಣಿ ನಿಯಮದಲ್ಲಿ ಬಿಜೆಪಿಯ ನಕಲಿ ರಾಷ್ಟ್ರೀಯತೆ ಮತ್ತೆ ಗೋಚರ: ಮಲ್ಲಿಕಾರ್ಜುನ ಖರ್ಗೆ ಆರೋಪ

Sumana Upadhyaya

ನವದೆಹಲಿ: ಸಶಸ್ತ್ರ ಪಡೆಗಳಿಗೆ ಹೊಸ ವಿಕಲಚೇತನ ಪಿಂಚಣಿ ನಿಯಮಗಳಲ್ಲಿ ಬಿಜೆಪಿ ಸರ್ಕಾರದ ನಕಲಿ ರಾಷ್ಟ್ರೀಯತೆ ಮತ್ತೆ ಗೋಚರಿಸುತ್ತದೆ ಈಗಿನ ನೀತಿಯ ಬದಲಾವಣೆಯು ಹಿಂದಿನ ಹಲವು ತೀರ್ಪುಗಳು, ನಿಯಮಗಳು ಮತ್ತು ಸ್ವೀಕಾರಾರ್ಹ ಜಾಗತಿಕ ಮಾನದಂಡಗಳನ್ನು ಉಲ್ಲಂಘಿಸುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೈನಿಕರ ಕುಂದುಕೊರತೆಗಳನ್ನು ಪರಿಹರಿಸಲು ಶೀಘ್ರವಾಗಿ ಮಾಜಿ ಸೈನಿಕ ಆಯೋಗವನ್ನು ಸ್ಥಾಪಿಸಲು ಅವರು ಒತ್ತಾಯಿಸಿದ್ದಾರೆ. ರಕ್ಷಣಾ ಸಚಿವಾಲಯವು (MoD) ಸಶಸ್ತ್ರ ಪಡೆಗಳ ಸಿಬ್ಬಂದಿಗೆ ವಿಕಲಾಂಗ ಪಿಂಚಣಿ ಮಂಜೂರು ಮಾಡಲು ಹೊಸ ನಿಯಮಗಳನ್ನು ತಂದಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. 

ಹೊಸ ನೀತಿಯು 'ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಅಪಘಾತದ ಪಿಂಚಣಿ ಮತ್ತು ಅಂಗವೈಕಲ್ಯ ಪರಿಹಾರ ಪ್ರಶಸ್ತಿಗಳ ಅರ್ಹತೆಯ ನಿಯಮಗಳು, 2023' ವ್ಯಾಖ್ಯಾನವನ್ನು ಬದಲಾಯಿಸುತ್ತದೆ, ಹೊಸ ನಿಯಮಗಳು ಹಿಂದಿನ ಎಲ್ಲಾ ಅರ್ಹತೆಯ ಮಾನದಂಡಗಳನ್ನು ಬದಲಾಯಿಸುತ್ತದೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ನಮ್ಮ ವೀರ ಸೇನಾಪಡೆಗಳಿಗೆ ಹೊಸ ವಿಕಲಚೇತನ ಪಿಂಚಣಿ ನಿಯಮಗಳಲ್ಲಿ ಬಿಜೆಪಿಯ ನಕಲಿ ರಾಷ್ಟ್ರೀಯತೆ ಮತ್ತೊಮ್ಮೆ ಗೋಚರಿಸುತ್ತದೆ. ಸುಮಾರು ಶೇಕಡಾ 40ರಷ್ಟು ಸೇನಾ ಅಧಿಕಾರಿಗಳು ಅಂಗವೈಕಲ್ಯ ಪಿಂಚಣಿಯೊಂದಿಗೆ ನಿವೃತ್ತರಾಗುತ್ತಾರೆ. ಪ್ರಸ್ತುತ ನೀತಿ ಬದಲಾವಣೆಯು ಅನೇಕ ಹಿಂದಿನ ತೀರ್ಪುಗಳು, ನಿಯಮಗಳು ಮತ್ತು ಸ್ವೀಕಾರಾರ್ಹ ಜಾಗತಿಕ ಮಾನದಂಡಗಳನ್ನು ಉಲ್ಲಂಘಿಸುತ್ತದೆ.

ಪೌರಕಾರ್ಮಿಕರಿಗೆ ಹೋಲಿಸಿದರೆ ಸೈನಿಕರಿಗೆ ಅನಾನುಕೂಲವಾಗಿರುವ ಮೋದಿ ಸರ್ಕಾರದ ಈ ಹೊಸ ನೀತಿಯನ್ನು ಅಖಿಲ ಭಾರತ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘವು ತೀವ್ರವಾಗಿ ಪ್ರತಿಭಟಿಸಿದೆ ಎಂದರು. 

ಜೂನ್ 2019 ರಲ್ಲಿ, ಮೋದಿ ಸರ್ಕಾರವು ಅಂಗವಿಕಲರ ಪಿಂಚಣಿಗೆ ತೆರಿಗೆ ವಿಧಿಸುವುದಾಗಿ ಘೋಷಿಸಿದಾಗ ಇದೇ ರೀತಿಯ ದ್ರೋಹ ಎಸಗಿತ್ತು ಎಂದು ಆರೋಪಿಸಿದ್ದಾರೆ. 

SCROLL FOR NEXT