ಪವನ್ ಕಲ್ಯಾಣ್
ಪವನ್ ಕಲ್ಯಾಣ್ 
ದೇಶ

ಬ್ಲೇಡ್‌ಗಳಿಂದ ಹಲ್ಲೆ; ಭದ್ರತೆ ಬಗ್ಗೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಕಳವಳ

Nagaraja AB

ವಿಜಯವಾಡ: ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ತಮ್ಮ ಭದ್ರತೆಗೆ ಸಂಬಂಧಿಸಿದಂತೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಕೆಲವು ವ್ಯಕ್ತಿಗಳು ತೆಳುವಾದ ಬ್ಲೇಡ್‌ಗಳಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಕಲ್ಯಾಣ್ ಅವರ ಪಕ್ಷವು ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

ಪಕ್ಷದ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ನಟ-ರಾಜಕಾರಣಿ, ದೊಡ್ಡ ಸಾರ್ವಜನಿಕ ಸಭೆಗಳಲ್ಲಿ ತಮ್ಮ ಮೇಲಿನ ದಾಳಿಯ ಬಗ್ಗೆ ಕಳವಳ ಕುರಿತು ಮಾಹಿತಿ ಹಂಚಿಕೊಂಡರು. ಜನರು ತಮ್ಮನ್ನು ಭೇಟಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ, ಕೆಲವು ವ್ಯಕ್ತಿಗಳು ಬ್ಲೇಡ್‌ಗಳೊಂದಿಗೆ ಗುಂಪಿನೊಳಗೆ ನುಸುಳುತ್ತಿದ್ದು, ತನಗೆ ಹಾಗೂ ಭದ್ರತಾ ತಂಡದ ಸದಸ್ಯರಿಗೆ ಬೆದರಿಕೆ ಹಾಕುತ್ತಿರುವುದಾಗಿ ತಿಳಿಸಿದರು.

ಎದುರಾಳಿ ಪಕ್ಷಗಳ ಸದಸ್ಯರಿಂದ ಇಂತಹ ಚಟುವಟಿಕೆ ನಡೆಯುತ್ತಿರುವುದಾಗಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ತಮ್ಮ ಬೆಂಬಲಿಗರನ್ನು ಭೇಟಿ ಮಾಡಲು ಸಮಯ ಮೀಸಲಿಡುವುದಾಗಿ ಅವರು ಮತದಾರರಿಗೆ ಭರವಸೆ ನೀಡಿದರು

"ನಾನು ಪ್ರತಿದಿನ ಕನಿಷ್ಠ 200 ಸದಸ್ಯರನ್ನು ಫೋಟೋ ತೆಗೆದುಕೊಳ್ಳಲು ಕರೆಯುತ್ತೇನೆ. ನಾವು ಕೆಲವು ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದ್ದರೆ, ದೊಡ್ಡ ಸಭೆಗಳ ಸಮಯದಲ್ಲಿ, ಕೆಲವು ಬಾಡಿಗೆ ವ್ಯಕ್ತಿಗಳು ತೆಳುವಾದ ಬ್ಲೇಡ್‌ಗಳನ್ನು ಬಳಸಿ ಭದ್ರತಾ ಸಿಬ್ಬಂದಿ ಹಾಗೂ ತನ್ನ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದಾರೆ. ಇತ್ತೀಚಿಗೆ ಅದು ನಡೆದಿದೆ ಎಂದರು.

SCROLL FOR NEXT