ಎನ್ಐಎ
ಎನ್ಐಎ  online desk
ದೇಶ

ಸ್ಫೋಟ ಪ್ರಕರಣದಲ್ಲಿ ಬಂಧನ: ದುರ್ನಡತೆ ಆರೋಪ; ಎನ್ಐಎ ವಿರುದ್ಧ ಟಿಎಂಸಿ ನಾಯಕನ ಪತ್ನಿ ದೂರು; ತನಿಖಾ ಸಂಸ್ಥೆ ಪ್ರತಿಕ್ರಿಯೆ ಹೀಗಿದೆ...

Srinivas Rao BV

ಕೋಲ್ಕತ್ತಾ: ಎನ್ಐಎಯಿಂದ ಬಂಧನಕ್ಕೆ ಒಳಗಾಗಿರುವ ಟಿಎಂಸಿ ನಾಯಕ ಮೊನೊಬ್ರತಾ ಜನ ಪತ್ನಿ ತನಿಖಾ ಸಂಸ್ಥೆಯ ವಿರುದ್ಧ ಆರೋಪ ಮಾಡಿದ್ದಾರೆ. ಭೂಪತಿನಗರ್ ನಲ್ಲಿರುವ ತಮ್ಮ ನಿವಾಸಕ್ಕೆ ತನಿಖೆ ನಡೆಸುವ ನೆಪದಲ್ಲಿ ಒತ್ತಾಯಪೂರ್ವಕವಾಗಿ ಪ್ರವೇಶಿಸಿದ ಎನ್ಐಎ ಅಧಿಕಾರಿಗಳು, ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಶನಿವಾರದಂದು ಎನ್ಐಎ ಬಲಾಯಿ ಚರಣ್ ಮೈಟಿ ಮತ್ತು ಮೊನೊಬ್ರತಾ ಜನ ಎಂಬುವವರನ್ನು 2022 ರಲ್ಲಿ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಬಂಧಿಸಿತ್ತು. ಈ ಸ್ಫೋಟ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದರು.

ಮನೋಬ್ರತಾ ಜನ ಪತ್ನಿ ಎನ್ಐಎ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಎನ್ಐಎ ಅಧಿಕಾರಿಗಳು ಶನಿವಾರ ದಾಳಿ ನಡೆಸಿದಾಗ ತಮ್ಮ ಮನೆಯ ಆಸ್ತಿ-ವಸ್ತುಗಳನ್ನು ಧ್ವಂಸಗೊಳಿಸಿದ್ದರೆಂದು ಆರೋಪಿಸಿದ್ದಾರೆ.

ಎನ್‌ಐಎ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ದೂರಿನ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, NIA ಪಶ್ಚಿಮ ಬಂಗಾಳದ ಭೂಪತಿನಗರ ಪ್ರದೇಶದಲ್ಲಿ ತನ್ನ ಇತ್ತೀಚಿನ ಕಾರ್ಯಾಚರಣೆಯಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ದುರುದ್ದೇಶಪೂರಿತ ಆರೋಪಗಳನ್ನು ನಿರಾಕರಿಸಿದೆ. ಮತ್ತು ಇಡೀ ವಿವಾದವನ್ನು ದುರದೃಷ್ಟಕರ ಎಂದು ತಳ್ಳಿಹಾಕಿದೆ.

NIA, ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ತನ್ನ ಕಾರ್ಯಾಚರಣೆ ಕ್ರಮಗಳು ನಿಷ್ಠಾವಂತ, ಕಾನೂನುಬದ್ಧ ಮತ್ತು ಕಾನೂನುಬದ್ಧವಾಗಿದೆ. ಕಚ್ಛಾ ಬಾಂಬ್‌ಗಳ ತಯಾರಿಕೆಗೆ ಸಂಬಂಧಿಸಿದ ಘೋರ ಅಪರಾಧದ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆ, ಕ್ರಮಗಳು ನಡೆಯುತ್ತಿವೆ ಎಂದು ಹೇಳಿದೆ.

SCROLL FOR NEXT